ಚಂಡೀಗಢ: ಚೆನ್ನಾಗಿಯೇ ಇದ್ದ, ಬರ್ತ್ ಡೇ ಸಂಭ್ರಮ ಆಚರಿಸಿದ ಮರುದಿನವೇ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲೆಯಲ್ಲೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ವಿದ್ಯಾರ್ಥಿಗೆ ಇದ್ದಕ್ಕಿದ್ದಂತೆಯೇ ಹೃದಯಾಘಾತವಾದ ದೃಶ್ಯ ಶಾಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಜಸ್ಥಾನದ ದೌಸಾದ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ 16 ವರ್ಷದ ಯತೇಂದ್ರ ಉಪಾಧ್ಯಾಯ ಮೃತ ದುರ್ದೈವಿ.
ತರಗತಿಗೆ ಹೋಗುತ್ತಿದ್ದಾಗ ಯತೇಂದ್ರ ಉಪಾಧ್ಯಾಯಗೆ ಹೃದಯಾಘಾತವಾಗಿದೆ. ತರಗತಿಗೆಂದು ಬ್ಯಾಗ್ ಹಾಕಿಕೊಂಡು ಬರುತ್ತಿದ್ದ ವಿದ್ಯಾರ್ಥಿ ಹಠಾತ್ ಕುಸಿದು ಬಿದ್ದು, ಅಲ್ಲೇ ಕೊನೆಯುಸಿರೆಳೆದಿದ್ದಾನೆ. ಮುಂಚಿನ ದಿನವಷ್ಟೇ ಯತೇಂದ್ರ ಉಪಾಧ್ಯಾಯ ಜನ್ಮ ದಿನ ಆಚರಿಸಿಕೊಂಡು ಸಂಭ್ರಮಿಸಿದ್ದ. ಇದೀಗ ಇದೆಂಥಾ ಸಾವು, ಇದು ನ್ಯಾಯವೇ? ಎಂದು ಕುಟುಂಬಸ್ಥರು ಕಂಬನಿ ಮಿಡಿಯುವಂತಾಗಿದೆ.
ಬರ್ತ್ ಡೇ ಆಚರಿಸಿದ ಮರುದಿನ ಶಾಲೆಗೆ ಬರುತ್ತಿದ್ದಂತೆಯೇ 10ನೇ ತರಗತಿ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ!
RELATED ARTICLES