Sunday, July 14, 2024
Homeರಾಷ್ಟ್ರೀಯಬರ್ತ್‌ ಡೇ ಪಾರ್ಟಿಯಲ್ಲಿ ಡ್ರಿಂಕ್ಸ್‌ ಸಾಕಾಗಲಿಲ್ಲವೆಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಸ್ನೇಹಿತನನ್ನೇ ಕೊಂದ ಪಾಪಿಗಳು!

ಬರ್ತ್‌ ಡೇ ಪಾರ್ಟಿಯಲ್ಲಿ ಡ್ರಿಂಕ್ಸ್‌ ಸಾಕಾಗಲಿಲ್ಲವೆಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಸ್ನೇಹಿತನನ್ನೇ ಕೊಂದ ಪಾಪಿಗಳು!

ಮುಂಬೈ: ಬರ್ತ್‌ಡೇ ಪಾರ್ಟಿಯಲ್ಲಿ ಸಾಕಾಗುವಷ್ಟು ಡ್ರಿಂಕ್ಸ್‌ ಕೊಡಲಿಲ್ಲವೆಂದು ಜನ್ಮ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದ ಸ್ನೇಹಿತನನ್ನೇ ನಾಲ್ಕನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಥಾಣೆಯ ಉಲ್ಲಾಸ್‌ನಗರದಲ್ಲಿ ಈ ಘಟನೆ ನಡೆದಿದೆ.
ಕಾರ್ತಿಕ್‌ ವಯಲ್‌ (24) ಮೃತ ದುರ್ದೈವಿ. ಘಟನೆಗೆ ಸಂಬಂಧಿಸಿ ಧೀರಜ್‌ ಯಾದವ್‌ (23), ನೀಲೇಶ್‌ ಕ್ಷೀರಸಾಗರ್‌ (23), ಸಾಗರ್‌ ಕಾಳೆ (24) ಎಂಬವರನ್ನು ಆರೋಪಿಗಳೆಂದು ಗುರುತಿಸಲಾಗಿದೆ.
ಜುಲೈ 1ರಂದು ಕಾರ್ತಿಕ್‌ ತನ್ನ ಮನೆಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಮೂವರು ಸ್ನೇಹಿತರನ್ನು ಕರೆದಿದ್ದ. ಆದರೆ ಪಾರ್ಟಿಯಲ್ಲಿ ಕುಡಿಯಲು ಸಾಕಾಗುವಷ್ಟು ಡ್ರಿಂಕ್ಸ್‌ ಕೊಡಿಸಲಿಲ್ಲವೆಂಬ ಕಾರಣಕ್ಕೆ ಸ್ನೇಹಿತರ ಮಧ್ಯೆ ವಾಗ್ವಾದ ನಡೆದಿದೆ.


ಈ ವೇಳೆ ಕಾರ್ತಿಕ್‌ ನೀಲೇಶ್‌ಗೆ ಹೊಡೆದಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಮೂವರೂ ಸೇರಿ ಕಾರ್ತಿಕ್‌ನನ್ನು ಮನೆಯ ಬಾಲ್ಕನಿಯಿಂದ ಕೆಳಗೆ ತಳ್ಳಿದ್ದರು ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular