ಹೆಬ್ರಿ : ಶಿವಪುರ ಗ್ರಾಮದ ಶ್ರೀ ಕ್ಷೇತ್ರ ಸೂರಿಮಣ್ಣು ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನದಲ್ಲಿ ಇತ್ತೀಚೆಗೆ ಶ್ರೀ ವಾದಿರಾಜ ಗುರು ಸಾರ್ವಭೌಮರ ಜನ್ಮದಿನೋತ್ಸವ ಹಾಗೂ ಭಜನಾ ಮಂಗಲೋತ್ಸವ, ಅನ್ಮಸಂತರ್ಪಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕ್ಷೇತ್ರದ ಮುಖ್ಯಸ್ಥ ಸದಾಶಿವ ಉಪಾಧ್ಯಾಯ, ರವಿರಾಜ್ ಉಪಾಧ್ಯಾಯ ಮುಂದಾಳತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ನೂರಾರು ಭಕ್ತ ವೃಂದದವರು ಭಾಗವಹಿಸಿದ್ದರು.