Tuesday, March 18, 2025
Homeಮಂಗಳೂರುತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಫಿಯಾ ಡಿಸೋಜ ಅವರ ಹುಟ್ಟು ಹಬ್ಬದ ಆಚರಣೆ

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಫಿಯಾ ಡಿಸೋಜ ಅವರ ಹುಟ್ಟು ಹಬ್ಬದ ಆಚರಣೆ

ಮಂಗಳೂರು: ದಿನಾಂಕ 21 ಬುಧವಾರ ಸಾಯಂಕಾಲ 5 ಗಂಟೆಗೆ ಸರಿಯಾಗಿ ಜಿಲ್ಲಾ ವೀಕ್ಷಕರಾದ ಪ್ರ್ಯಾಂಕಿ ಡಿಸೋಜರವರ ಮುದ್ದಿನ ಮಗಳಾದ ಫಿಯಾ ಡಿಸೋಜರವರ ನಾಲ್ಕನೇ ವರ್ಷದ ಹುಟ್ಟು ಹಬ್ಬದ ಆಚರಣೆಯನ್ನು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಹಲವಾರು ಪ್ರಮುಖರು ಆಗಮಿಸಿದ್ದು ಫಿಯಾಳ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು.. ಈ ಕಾರ್ಯಕ್ರಮದಲ್ಲಿ ಜಿಲ್ಲಾ ವೀಕ್ಷಕರಾದ ಪ್ರಾಂಕಿ ಡಿಸೋಜ ಮತ್ತು ಅವರ ಧರ್ಮಪತ್ನಿಯಾದ ಸುಷ್ಮಾ ಮತ್ತು ಅವರ ಮಗಳಾದ ಫಿಯಾ ಡಿಸೋಜ, ಜಿಲ್ಲಾಧ್ಯಕ್ಷರಾದ ಕೃಷ್ಣಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಅಜರುದ್ದೀನ್, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ಜಯ ಪೂಜಾರಿ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ನಾಗಲಕ್ಷ್ಮಿ, ಮಹಿಳಾ ಉಪಾಧ್ಯಕ್ಷರಾದ ಗುಲಾಬಿ ಕೋಟ್ಯಾನ್, ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿಯಾದ ಅವಿನಾಶ್ ಮಾಸ್ಟರ್, ಕಾರ್ಮಿಕ ಯುವ ಘಟಕದ ಅಧ್ಯಕ್ಷರಾದ ರೋಷನ್ ಬಂಗೇರ, ಕಾರ್ಮಿಕ ಘಟಕದ ಜೊತೆ ಕಾರ್ಯದಶಿಯಾದ ಮಜಿದ್. ಜಿಲ್ಲಾ ಕಾರ್ಯಕಾರಿ ಸದಸ್ಯರಾದ ಶಾಬುದ್ದೀನ್, ಜಿಲ್ಲಾ ಮಹಿಳಾ ಕೋಶಾಧಿಕಾರಿಯಾದ ಸುನಂದ ಟಿ ಕೋಟ್ಯಾನ್, ಸುಲೋಚನ, ಸರೋಜಿನಿ, ಜ್ಯೋತಿ, ನಂದನ, ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular