ಲಕ್ನೊ: ಶಾಲೆಗೆ ಟಿಫಿನ್ ಬಾಕ್ಸ್‌ನಲ್ಲಿ ಬಿರಿಯಾನಿ ತಂದ ಮೂರನೇ ತರಗತಿ ವಿದ್ಯಾರ್ಥಿಯನ್ನು ಶಾಲಾ ಮುಖ್ಯೋಪಾಧ್ಯಾಯ ಶಾಲೆಯಿಂದ ಹೊರಹಾಕಿದ ಘಟನೆ ಈಗ ವಿವಾದದ ಸ್ವರೂಪ ಪಡೆದಿದೆ. ಉತ್ತರ ಪ್ರದೇಶದ ಬಿಜೋರ್‌ನ ಆಮ್ರೋಹದಲ್ಲಿ ಈ ಘಟನೆ ನಡೆದಿದೆ.
ಅಮ್ರೊಹದ ಪ್ರತಿಷ್ಠಿತ ಶಾಲೆಯೊಂದರ 3ನೇ ತರಗತಿಯ ವಿದ್ಯಾರ್ಥಿ ಟಿಫಿನ್ ಬಾಕ್ಸ್‌ಗೆ ಬಿರಿಯಾನಿ ತಂದಿದ್ದಾನೆ. ಇದನ್ನು ನೋಡಿ ಶಾಲೆಯ ಮುಖ್ಯೋಪಾಧ್ಯಾಯ ಆತನನ್ನು ಶಾಲೆಯಿಂದಲೇ ಹೊರಹಾಕಿದ್ದಾನೆ. ಅಲ್ಲದೆ ವಿದ್ಯಾರ್ಥಿಯ ಬಗ್ಗೆ ಅವಹೇಳನಕಾರಿ ಟೀಕೆ ಕೂಡ ಮಾಡಿದ್ದಾನೆ. ಮುಖ್ಯೋಪಾಧ್ಯಾಯನ ನಡವಳಿಕೆಯಿಂದ ವಿದ್ಯಾರ್ಥಿಯ ತಾಯಿ ಗರಂ ಆಗಿದ್ದಾರೆ. ತಮ್ಮ ಮಗನನ್ನು ಮುಸ್ಲಿಂ ಸಮುದಾಯದವರೆಂದು ಹೀಗೆ ಮಾಡಿದ್ದೀರಾ? ಎಂದು ತಾಯಿ ಪ್ರಶ್ನಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಂಸಾಹಾರ ತರುವ ವಿದ್ಯಾರ್ಥಿಗಳಿಗೆ ಇಲ್ಲಿ ಶಿಕ್ಷಣ ನೀಡಲಾಗುವುದಿಲ್ಲ ಎಂದು ಮುಖ್ಯೋಪಾಧ್ಯಾಯ ಹೇಳಿರುವುದಾಗಿ ಆರೋಪಿಸಲಾಗಿದೆ. ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಮ್ರೊಹದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಸುಧೀರ್ ಕುಮಾರ್ ಹೇಳಿದ್ದಾರೆ.