ಮಂಗಳೂರು: ಭಾರತೀಯ ವಾಯುಪಡೆಯಲ್ಲಿ ಸೇವೆ ಮಾಡಿ ನಿವೃತ್ತರಾಗಿರುವ ಹಿರಿಯರೊಬ್ಬರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟಗೆ ತಮ್ಮ ಒಂದು ತಿಂಗಳ ಪಿಂಚಣಿ ಮೊತ್ತವನ್ನು ನೀಡಿದ್ದಾರೆ. ಕಂಕನಾಡಿ ನಿವಾಸಿ, ವಾಯುಪಡೆಯಲ್ಲಿ ನಿವೃತ್ತರಾಗಿರುವ ದಿವಾಕರ್ ತಮ್ಮ ಒಂದು ತಿಂಗಳ ಪಿಂಚಣಿ ಹಣವನ್ನು ಕ್ಯಾ. ಬ್ರಿಜೇಶ್ ಚೌಟಗೆ ಹಸ್ತಾಂತರಿಸಿದ್ದಾರೆ. ಈ ಬಾರಿ ಸೇನೆಯಲ್ಲಿ ದುಡಿದ ವ್ಯಕ್ತಿಯೊಬ್ಬರಿಗೆ ಬಿಜೆಪಿ ಟಿಕೆಟ್ ನೀಡಿದ್ದು ನಮಗೆಲ್ಲ ಹೆಮ್ಮೆಯ ವಿಷಯ. ಅವರನ್ನು ಗೆಲ್ಲಿಸಲು ನಾವು ಪೂರ್ಣ ಪ್ರಮಾಣದ ಬೆಂಬಲ ನೀಡುತ್ತೇವೆ. ನನ್ನ ಒಂದು ತಿಂಗಳ ಪಿಂಚಣಿ ದುಡ್ಡು ಸಣ್ಣ ಮೊತ್ತ. ಆದರೆ ನನ್ನದೂ ಕಿಂಚಿತ್ತು ಸಹಾಯ ಇರಲಿ ಎಂದು ದೇಣಿಗೆ ನೀಡಿದ್ದೇನೆ ಎಂದು ಅವರು ಮಾಧ್ಯಮ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ. ಕ್ಯಾ. ಬ್ರಿಜೇಶ್ ಚೌಟ ಸೇನೆಯಲ್ಲಿದ್ದವರು. ದೇಶದ ಬಗ್ಗ ಕಾಳಜಿ ಇರುವವರು. ಅವರು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ರಹಿತ ಅಭಿವೃದ್ಧಿ ಪರ್ವ ಮುಂದುವರಿಯುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.