Sunday, July 21, 2024
Homeರಾಷ್ಟ್ರೀಯಬಿ.ಜೆ.ಪಿ. ಕೇಂದ್ರ ಕಾರ್ಯಾಲಯ ನವ ದೆಹಲಿಯ ಗ್ರಂಥಾಲಯಕ್ಕೆ ಲೇಖಕ ಅನಿಂದಿತ್ ಗೌಡ ಅವರ “ರಿಕಾಲಿಂಗ್ ಅಮರ...

ಬಿ.ಜೆ.ಪಿ. ಕೇಂದ್ರ ಕಾರ್ಯಾಲಯ ನವ ದೆಹಲಿಯ ಗ್ರಂಥಾಲಯಕ್ಕೆ ಲೇಖಕ ಅನಿಂದಿತ್ ಗೌಡ ಅವರ “ರಿಕಾಲಿಂಗ್ ಅಮರ ಸುಳ್ಯ” ಪುಸ್ತಕದ ಗೌರವ ಪ್ರತಿ

ನವದೆಹಲಿ: “ರಿಕಾಲಿಂಗ್ ಅಮರ ಸುಳ್ಯ” ಖ್ಯಾತಿಯ ಯುವ ಲೇಖಕ ಅನಿಂದಿತ್ ಗೌಡ, ನವ ದೆಹಲಿಯಲ್ಲಿನ ಬಿ.ಜೆ.ಪಿ. ಕೇಂದ್ರ ಕಾರ್ಯಾಲಯದ ಗ್ರಂಥಾಲಯಕ್ಕೆ ಕೃತಿಯ ಗೌರವ ಪ್ರತಿಯನ್ನು ಹಸ್ತಾಂತರಿಸಿದರು.

ಬಿ.ಜೆ.ಪಿ. ರಾಷ್ಟ್ರೀಯ ಸಂಯೋಜಕರು (ದಾಖಲಾತಿ ಮತ್ತು ಗ್ರಂಥಾಲಯ ವಿಭಾಗ) ಡಾ. ಅಸೀರ್ವಥಂ ಅಚಾರಿ, Ph.D ಗೌರವ ಪ್ರತಿಯನ್ನು ಗ್ರಂಥಾಲಯ ಸಂಗ್ರಹಕ್ಕೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಗ್ರಂಥಪಾಲಕಿ ಪಾರ್ವತಿ ಹಾಗೂ ಸಹಯೋಗಿ ಸಂಜೀವ್ ಕುಮಾರ್ ಉಪಸ್ಥಿತರಿದ್ದರು.

ಆರಂಭಿಕ ಸ್ವಾತಂತ್ರ್ಯ ಹೋರಾಟ ಹಾಗೂ ಅನೇಕ ಅಸಾಧಾರಣ ವೀರರ ತ್ಯಾಗದ ದಾಖಲಾಧಾರಿತ ಪ್ರಸ್ತುತಿಗೆ ಗೌರವಪೂರ್ಣ ಪರಿಗಣನೆ ದೊರಕುತ್ತಿರುವುದು ಹೆಮ್ಮೆಯ ವಿಚಾರ ಎಂದು ಲೇಖಕರು ಮಾಧ್ಯಮಕ್ಕೆ ತಿಳಿಸುವುದರೊಂದಿಗೆ, ಗೌರವ ಪ್ರತಿಯ ಒಳಾಂಗಣದಲ್ಲಿ ರಾಷ್ಟ್ರದ ಧೀರ ಭೂತಕಾಲವನ್ನು ಗೌರವಿಸುವುದು, ರಾಷ್ಟ್ರೀಯ ಸಮಗ್ರತೆಯನ್ನು ಎತ್ತಿಹಿಡಿಯುವುದು ಮತ್ತು ಶ್ರೀಮಂತ ಪರಂಪರೆಯನ್ನು ಉಳಿಸಿಕೊಳ್ಳುವ ಬದ್ಧತೆಯ ಬಗ್ಗೆ ಓದುಗರನ್ನು ಪ್ರೇರೇಪಿಸುವ ವಿಶೇಷ ಸಂದೇಶವನ್ನು ಬರೆದಿರುವುದಾಗಿ ಲೇಖಕರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular