ಲಕ್ನೊ: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿರುವುದು ಎನ್ ಡಿಎ ಮೈತ್ರಿಕೂಟದ ನಿರೀಕ್ಷಿತ ಸೀಟುಗಳನ್ನು ಪಡೆಯುವಲ್ಲಿ ವಿಫಲವಾಗುವ ಲಕ್ಷಣ ಕಂಡುಬಂದಿದೆ. ಈ ವರೆಗಿನ ಮಾಹಿತಿಯಂತೆ ಉತ್ತರ ಪ್ರದೇಶದಲ್ಲಿ ಎನ್ ಡಿಎಗೆ 45 ಸೀಟು ಕಡಿಮೆಯಾಗುವ ಸಾಧ್ಯತೆ ಗೋಚರಿಸಿದೆ.
80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 2019ರಲ್ಲಿ ಬಿಜೆಪಿಗೆ ಗರಿಷ್ಠ ಸ್ಥಾನಗಳು ಬಂದಿದ್ದವು. ಆದರೆ ಈ ಬಾರಿ ಅಲ್ಲಿ ಸೀಟುಗಳು ಕಡಿಮೆಯಾಗಿವೆ.