ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿ ನಗರ ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಸಹಿತ ಉಡುಪಿ ನಗರ ಭಾಗದ ಪ್ರಮುಖ ಮಹಿಳೆಯರನ್ನು ಗುರುತಿಸಿ, ಯುವ ಮೋರ್ಚಾ ತಂಡವು ಖುದ್ದಾಗಿ ಅವರ ಬಳಿ ತೆರಳಿ ಸ್ಮರಣಿಕೆಯನ್ನು ನೀಡಿ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ನಗರ ಯುವ ಮೋರ್ಚಾ ಉಪಾಧ್ಯಕ್ಷ ಧನುಷ್ ಬಿ.ಕೆ., ಸಂದೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿಗಳಾದ ನಿತಿನ್ ಪೈ ಮಣಿಪಾಲ, ಶಿವಪ್ರಸಾದ್, ಕಾರ್ಯದರ್ಶಿ ಧನುಷ್ ಕಡಿಯಾಳಿ, ನಗರ ಕಾರ್ಯಾಲಯ ಕಾರ್ಯದರ್ಶಿ ಭೂಷಣ್, ದೀಕ್ಷಿತ್ ಶೆಟ್ಟಿ, ಆಕಾಂಶ್ ಮಣಿಪಾಲ ಮತ್ತಿತರರು ಉಪಸ್ಥಿತರಿದ್ದರು.