ಸಾವ್ಯ :ಜೂ 16 ಸಾವ್ಯ ಗ್ರಾಮದಲ್ಲಿ ನರೇಂದ್ರ ದಾಮೋದರ ದಾಸ್ ಮೋದಿಜೀ ಸತತವಾಗಿ 3 ನೇ ಭಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರವೇರಿದ ಸಲುವಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾಗಿ ನೂತನವಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರ ಭರ್ಜರಿ ವಿಜಯದ ಪ್ರಯುಕ್ತ ಸಾವ್ಯ ಗ್ರಾಮದಲ್ಲಿ ಅದ್ದೂರಿಯಾಗಿ ವಿಜಯೋತ್ಸವ ನಡೆಯಿತು. ವಿಜಯೋತ್ಸವದಲ್ಲಿ ಮಂಡಲ
ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್ ಸಾವ್ಯ, ಬಿಜೆಪಿ ಸಾವ್ಯ ಶಕ್ತಿ ಕೇಂದ್ರ ಅಧ್ಯಕ್ಷ ಸಂತೋಷ್ ಹೆಗ್ಡೆ, ಬೂತ್ ಸಮಿತಿ ಅಧ್ಯಕ್ಷರಾದ ಶಶಿಧರ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಹೆಗ್ಡೆ, ಸರೋಜ, ಬೂತ್ ಕಾರ್ಯದರ್ಶಿ ಜಗದೀಶ್ ಹಾಗೂ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಉಪಸ್ಥಿತರಿದ್ದರು.