ಬೆಳ್ತಂಗಡಿ : ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಇದರ ಮೊದಲ ಕಾರ್ಯಕಾರಣಿ ಸಭೆಯು ಪಕ್ಷದ ಕಚೇರಿಯಲ್ಲಿ ಮಾ.12 ರಂದು ನಡೆಯಿತು. ಮುಂದಿನ ಜವಾಬ್ದಾರಿ ಹಾಗೂ ಮುಂದಿನ ಕಾರ್ಯ ಯೋಜನೆ ಲೋಕಸಭಾ ಚುನಾವಣಾ ತಯಾರಿ, ಕಾರ್ಯಾಚಟುವಟಿಗಳ ಬಗ್ಗೆ ಸವಿಸ್ತಾರವಾಗಿ ಯುವಮೋರ್ಚಾ ಪ್ರಭಾರಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ವಹಿಸಿ ಯುವ ಚೌಪಾಲ್, ಟೆನ್ ಯೂತ್ ಒನ್ ಗ್ರಾಮ್ , ಗೋಡೆ ಬರಹ,ಪ್ರಧಾನಿ ನರೇಂದ್ರ ಮೋದಿಜಿ ಸಾಧನೆಯ ರೀಲ್ಸ್ ಸ್ಪರ್ಧೆಯ ಬಗ್ಗೆ, ಯುವ ಮೋರ್ಚಾ ಬಲಿಷ್ಠಗೊಳ್ಳಲು ಎಲ್ಲರೂ ಒಗ್ಗಟ್ಟಾಗಿ ಸಂಘಟತ್ಮ ಕವಾಗಿ ದುಡಿಯೋಣ, ಪಕ್ಷವನ್ನು ಇನ್ನಷ್ಟು ಬಲಿಷ್ಠಪಡಿಸೋಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಪ್ರಮೋದ್ ದಿಡುಪೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಹೇಮಂತ್ ಶೆಟ್ಟಿ ನೇತಾರ ಹಾಗೂ ಮಂಡಲ ಯುವಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಪ್ರಸಾದ್ ಗೌಡ ಕಡಮ್ಮಾಜೆ ಸ್ವಾಗತಿಸಿ ಇನ್ನೊರ್ವ ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್ ಸಾವ್ಯ ಧನ್ಯವಾದವಿತ್ತರು.