ಬಜಪೆ: ನೆಲ್ಲಿದಡಿಗುತ್ತುವಿನ ಸಮಸ್ಯೆಯ ಬಗ್ಗೆ ತಿಳಿಯುತ್ತಿದಂತೆ ಎಸ್.ಇ.ಜೆಡ್ ನ ಅಧಿಕಾರಿಗಳು ಮತ್ತು ನೆಲ್ಲಿದಡಿ ಗುತ್ತುವಿಗೆ ಸಂಬಂಧಪಟ್ಟವರನ್ನು ಕರೆದು ಸಭೆ ನಡೆಸಿದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ.
ಜಿಲ್ಲಾಧಿಕಾರಿಗಳು, ಶಾಸಕರು, ನೆಲ್ಲಿದಡಿಗುತ್ತುವಿಗೆ ಸಂಬಂಧಫಟ್ಟವರು ಮತ್ತು ವ್ಯವಸ್ಥಾಪನಾ ಸಮಿತಿಯವರನ್ನು ಒಳಗೊಂಡ ಸಭೆಯನ್ನು ನಡೆಸಿ ನಿರ್ಧಾರಕ್ಕೆ ಬರುವಂತೆ ಇಂದಿನ ಸಭೆಯಲ್ಲಿ ಸಂಸದರು ತೀರ್ಮಾನ ಮಾಡಿದರು.
ತುಳುನಾಡಿನ ದೈವ – ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಮ್ಮ ಹೆಮ್ಮೆಯ ಸಂಸದರು ಈ ವಿಷಯದ ಕುರಿತು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ನಮಗೆ ಇದೆ.