ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್ ಸಂತೋಷ್ ರವರು ಸಾವರ್ಕರ್ ಬಗೆಗಿನ ಸುಳ್ಳು ಅಪಪ್ರಚಾರ ಮಾಡುತ್ತಿರುವವರಿಗೆ ಖಡಕ್ ಎಚ್ಚರಿಕೆ ನೀಡಿದರು. ಸಾವರ್ಕರ್ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದನ್ನು ನಿಲ್ಲಿಸದಿದ್ದರೆ ನಾವು ಕೂಡ ಸುಮ್ಮನೆ ಇರಾಲಾರೆವು.
ಭಾರತ ಮಾತೆಗೆ ಜೈಕಾರ ಹಾಕಿದರೆ, ವಂದೇ ಮಾತರಂ ಗೀತೆಯನ್ನು ಹಾಡಿದರೆ ನೀವು ಆರ್ ಎಸ್ ಎಸ್ ನವರು, ಎ ಬಿ ವಿ ಪಿ ಗೆ ಸಂಭದಪಟ್ಟ ಕಾರ್ಯಕ್ರಮ ಎಂದೆಲ್ಲ ಹೇಳುತ್ತಾರೆ. ಆದರೆ ಸಾವರ್ಕರ್ ರವರ ಜೀವನ ಹೇಗಿತ್ತು, ಸಾವರ್ಕರ್ ರವರು ಯಾವ ರೀತಿ ಭಾರತ ಮಾತೆಯ ರಕ್ಷಣೆಗೆ ಹೋರಾಡಿದ್ದಾರೆ ಎಂಬುದು ತಿಳಿಯದೇ ನೀಚ ಮನಸ್ಸಿನಿಂದ ಮಾತನಾಡುತ್ತಿದ್ದಾರೆ. ಅಂಥವರಿಗೆ ನಾವು ಉತ್ತರ ನೀಡುತ್ತೇವೆ ಎಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಸ್ವರಾಜ್-75 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ರವರು ಹೇಳಿದರು.