Saturday, July 20, 2024
HomeUncategorizedಮರ್ಣೆಯಲ್ಲಿ ರಕ್ತದಾನ ಶಿಬಿರ

ಮರ್ಣೆಯಲ್ಲಿ ರಕ್ತದಾನ ಶಿಬಿರ

ಮರ್ಣೆ ಯೂಥ್ ಸ್ಪೋರ್ಟ್ಸ್ ಕಲ್ಚರಲ್ ಅಸೋಸಿಯೇಷನ್ ಮತ್ತು ಸೀನಿಯರ್ ಚೇಂಬರ್ಸ್ ಉಡುಪಿ ಟೆಂಪಲ್ ಸಿಟಿ ಲಿಜನ್ ಮತ್ತು ಜಿಲ್ಲಾ ಆಸ್ಪತ್ರೆ ಉಡುಪಿ ಇದರ ಸಹಯೋಗದಲ್ಲಿ ಮರ್ಣೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು. ಮೊದಲ ಬಾರಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಊರ ಪರಊರ 35 ಅಧಿಕ ದಾನಿಗಳು ರಕ್ತದಾನ ಮಾಡಿದರು. ಈ ರಕ್ತದಾನ ಶಿಬಿರದ ಉದ್ಘಾಟನೆಯನ್ನು ಜಿಲ್ಲಾ ಆಸ್ಪತ್ರೆಯ ಡಾ. ಮಂಜುಶ್ರೀ ಉಡುಪಿ ಇವರು ಹಾಗೂ ಗಣ್ಯರು ನೆರವೇರಿಸಿದರು.
ಈ ಉದ್ಘಾಟನಾ ಸಮಾರಂಭದಲ್ಲಿ ಟೆಂಪಲ್ ಸಿಟಿ ಲೀಜನ್ ಅಧ್ಯಕ್ಷ ಸಂತೋಷ್ ಕುಮಾರ್, ಗಿರಿಜಾ ಹೆಲ್ತ್ ಸರ್ಜಿಕಲ್ಸ್ ಉಡುಪಿ ಇದರ ಮಾಲಕ ರವೀಂದ್ರ ಶೆಟ್ಟಿ, ಗಣೇಶೋತ್ಸವ ಉತ್ಸವ ಸಮಿತಿ ಮರ್ಣೆಯ ಪದ್ಮನಾಭ ಹೆಗ್ಡೆ, ಶಾಲಾ ಸಂಚಾಲಕರಾದ ದಯಾನಂದ ನಾಯಕ್, ಮುಖ್ಯೋಪಾಧ್ಯಾಯರಾದ ಕೃಷ್ಣ ನಾಯ್ಕ್, ಅಲೆವೂರು ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀಕಾಂತ್ ನಾಯಕ್ ಕರ್ವಾಲು, ವಿಜಯ್ ಕುಮಾರ್ ಉದ್ಯಾವರ, ಯೂಥ್ ಕ್ಲಬ್ ನ ಅಧ್ಯಕ್ಷ ರಾಘವೇಂದ್ರ ಗವಾಲ್ಕಾರ್, ಗೌರವಾಧ್ಯಕ್ಷರಾದ ಹರೀಶ್ ಶೆಟ್ಟಿ ಮರ್ಣೆ, ಕಿರುತೆರೆಯ ನಟಿ ಪವಿತ್ರ ಶೆಟ್ಟಿ ಕಟಪಾಡಿ ಉಪಸ್ಥಿತರಿದ್ದು ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು ಹಾಗೂ ಯೂಥ್ ಕ್ಲಬ್ ನ ಜನೋಪಯೋಗಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು, ಗೌರವ ಅಧ್ಯಕ್ಷರಾದ ಹರೀಶ್ ಶೆಟ್ಟಿ ಮರ್ಣೆ ಇವರು ಶಿಬಿರದಲ್ಲಿ ಭಾಗವಹಿಸಿದ ಊರ ಪರ ಊರ ಸಂಘ ಸಂಸ್ಥೆಗಳು, ದಾನಿಗಳು, ವೈದ್ಯಕೀಯ ಸಿಬ್ಬಂದಿಗಳನ್ನು ಅಭಿನಂದಿಸಿದರು, ನಾಗೇಶ್ ನಾಯಕ್ ಮರ್ಣೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತರು.

RELATED ARTICLES
- Advertisment -
Google search engine

Most Popular