ಬಪ್ಪನಾಡು:: ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್, ಮುಲ್ಕಿ ಸುಂದರ್ ರಾಮ ಶೆಟ್ಟಿ ಕಾಲೇಜ್ ಶಿರ್ವ ಎನ್.ಎಸ್.ಎಸ್ ವಿಭಾಗ ಹಾಗೂ ಹೆಚ್ ಡಿ ಎಫ್ಫ್ ಸಿ ಬ್ಯಾಂಕ್ ಉಡುಪಿ ಇದರ ಸಯುಕ್ತ ಆಶ್ರಯದಲ್ಲಿ, ಜಿಲ್ಲಾ ಆಸ್ಪತ್ರೆ ಬ್ಲಡ್ ಬ್ಯಾಂಕ್ ಉಡುಪಿ ಸಹಯೋಗದೊಂದಿಗೆ ರಕ್ತದಾನ ಶಿಬಿರ ಜರಗಿತು. 56 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲೆ 317ಡಿ ಯ ಪ್ರಾಂತ್ಯ 11 ರ ಪ್ರಾಂತ್ಯದ್ಯಕ್ಷ ವೆಂಕಟೇಶ ಹೆಬ್ಬಾರ್ ಉದ್ಘಾಟಿಸಿ ಪ್ರಸ್ತುತ ಕಾಲದಲ್ಲಿ ರಕ್ತದಾನಕ್ಕೆ ಯುವ ಜನತೆ ಹಿಂದೇಟು ಹಾಕುತ್ತಿರುವುದು ನಿಜಕ್ಕೂಖೇಧನೀಯ ಕಳೆದ ವರ್ಷ ನಮ್ಮ ಸಂಸ್ಥೆ 680 ಕ್ಕೂ ಅಧಿಕ ರಕ್ತ ಸಂಗ್ರಹಿಸಿ ಜಿಲ್ಲೆಯ ವಿವಿಧ ರಕ್ತ ಸಂಗ್ರಹಣ ಕೇಂದ್ರಕ್ಕೆ ನೀಡಿರುವುದು ಅದರಲ್ಲಿ ಶಿರ್ವಾದ ಎಂ ಎಸ್ ಆರ್ ಎಸ್ ಕಾಲೇಜಿನ ಪಾಲು ಇದೆ ಎಂದರು.ಜಿಲ್ಲಾ ಆಸ್ಪತ್ರೆ ಉಡುಪಿಯ ಡಾಕ್ಟರ್ ವೀಣಾ ಮಾತನಾಡಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ನಾಲ್ಕು ಬಾರಿ ಕನಿಷ್ಠಪಕ್ಷ ಒಂದು ಬಾರಿಯಾದರೂ ರಕ್ತದಾನ ಮಾಡಿ ಅವಶ್ಯಕತೆ ಉಳ್ಳವರ ಪ್ರಾಣವನ್ನು ಕಾಪಾಡಬೇಕು ಅಲ್ಲದೆ ರಕ್ತದಾನ ಮಾಡಿ ಅನೇಕ ಪ್ರಯೋಜನಗಳು ನಮಗೂ ದೊರಕುತ್ತದೆ ಎಂಬ ಮಾಹಿತಿಯನ್ನು ನೀಡಿದರು ಎಂ ಎಸ್ ಆರ್ ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಮಿಥುನ್ ಚಕ್ರವರ್ತಿ ಮಾತನಾಡಿ ರಕ್ತದಾನದಿಂದ ಅನೇಕ ಪ್ರಾಣ ಉಳಿಯುವುದು ಮಾತ್ರವಲ್ಲದೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಎಂದು ಅಧ್ಯಕ್ಷಿಯ ಭಾಷಣದಲ್ಲಿ ಹೇಳಿ ಪ್ರಥಮ ರಕ್ತದಾನವನ್ನು ಮಾಡಿ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಿಟ್ಟೆ ಸ್ನಾಥಕೋತರ ಗಣಕಶಾಸ್ತ್ರ ವಿಭಾಗದ ಮುಖ್ಯ ಪ್ರಾಧ್ಯಾಪಕಿ ಡಾಕ್ಟರ್ ಸ್ಪೂರ್ತಿ, ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್, ಎನ್ಎಸ್ ಎಸ್ ಅಧಿಕಾರಿ ಹೇಮಲತಾ ಶೆಟ್ಟಿ, ಹೆಚ್ ಡಿ ಎಫ್ ಸಿ ಉಡುಪಿಯ ಉಪ ವ್ಯವಸ್ಥಾಪಕ ರಾಘವೇಂದ್ರ ರಾವ್, ವೈಶಾಕ್ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.
ಮುಲ್ಕಿ ; ಮುಲ್ಕಿ ಸುಂದರ್ ರಾಮ್ ಶೆಟ್ಟಿ ಶಿರ್ವ ಕಾಲೇಜಿ ನಲ್ಲಿ ರಕ್ತದಾನ ಶಿಬಿರ
RELATED ARTICLES