ಬಂಟ್ವಾಳ ತಾಲ್ಲೂಕಿನ ಗ್ಯಾರೇಜು ಮಾಲೀಕರ ಸಂಘದ ವತಿಯಿಂದ ಬಿ.ಸಿ.ರೋಡಿನ ಅಜೆಕಲ ಸಭಾಂಗಣದಲ್ಲಿ ಭಾನುವಾರ ನಡೆದ ‘ರಕ್ತದಾನ ಶಿಬಿರ’ ಕಾರ್ಯಕ್ರಮಕ್ಕೆ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯ ಡಾ. ಶ್ರೇಯಸ್ ದೊಡ್ಡಿಹಿತ್ಲು ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಅಧ್ಯಕ್ಷ ಸುಧೀರ್ ಪೂಜಾರಿ, ಪ್ರಮುಖರಾದ ದಿವಾಕರ ಶಂಭೂರು, ಸುರೇಶ್ ಬೈಂದೂರು, ಜನಾರ್ದನ ಅತ್ತಾವರ, ಗೋಪಾಲ ಭಂಡಾರಿ, ನಾಗೇಶ್ ಟೈಲರ್, ಶ್ರೀನಿವಾಸ ಶೆಟ್ಟಿ ಮತ್ತಿತರರು ಇದ್ದರು.