Saturday, December 14, 2024
HomeUncategorizedಬಿಎಂಟಿಸಿ(BMTC) ಬಸ್​ ಚಾಲನೆಯಲ್ಲಿ ಮಾಡುತ್ತಿರುವಾಗಲೇ ಡ್ರೈವರ್​ಗೆ ಹೃದಯಾಘಾತ

ಬಿಎಂಟಿಸಿ(BMTC) ಬಸ್​ ಚಾಲನೆಯಲ್ಲಿ ಮಾಡುತ್ತಿರುವಾಗಲೇ ಡ್ರೈವರ್​ಗೆ ಹೃದಯಾಘಾತ

ಬೆಂಗಳೂರು: ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಕರು ಇರುವಾಗ ಹೃದಯಾಘಾತದಿಂದ ಡ್ರೈವರ್ ಸಾವನ್ನಪ್ಪಿರುವ ಘಟನೆ ನೆಲಮಂಗಲ ಟೌನ್ ಬಿನ್ನಮಂಗಲ ಬಸ್ ನಿಲ್ದಾಣ ಬಳಿ ನಡೆದಿದೆ. ಹಾಸನ ಮೂಲದ ಚಾಲಕ ಕಿರಣ್‌ಕುಮಾರ್ (40) ಮೃತ ಚಾಲಕ. ಇಂದು (ನವೆಂಬರ್ 06) ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಡಿಪೋಗೆ ಸೇರಿದ ಬಸ್ ಡ್ರೈವ್​ ಮಾಡಿಕೊಂಡು ಹೋಗುತ್ತಿರುವಾಗಲೇ ಏಕಾಏಕಿ ಹೃದಯಾಘಾತವಾಗಿದೆ. ಕೂಡಲೇ ಚಾಲಕ ಕಿರಣ್‌ಕುಮಾರ್ ಬಸ್​ ರಸ್ತೆ ಬದಿಗೆ ಹಾಕಿ ಅಲ್ಲೇ ಪ್ರಾಣಬಿಟ್ಟಿದ್ದಾನೆ.

ಹಾಸನ ಮೂಲದ ಚಾಲಕ ಕಿರಣ್‌ಕುಮಾರ್, ಡಿಪೋ 40ರಲ್ಲಿ ಕಳೆದ 6 ವರ್ಷದಿಂದ ಡೈವರ್ ಆಗಿ ಕೆಲಸ ಮಾಡುತ್ತಿದ್ದರು. ಆದ್ರೆ, ದುರದೃಷ್ಟವಶಾತ್ ಇಂದು ಬಸ್ ಚಾಲನೆ ಮಾಡುವಾಗಲೇ ಹೃದಯಘಾತವಾಗಿದೆ. ಕೂಡಲೇ ನಿರ್ವಾಹಕ ಒಬಳೇಶ್‌ ಸಹಾಯದಿಂದ ಚಾಲಕನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ, ಅಷ್ಟರಾಗಲೇ ಕಿರಣ್‌ಕುಮಾರ್ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುಣ್ಯಕ್ಕೆ ಹೃದಯಘಾತವಾಗುತ್ತಿದ್ದಂತೆಯೇ ಕಿರಣ್‌ಕುಮಾರ್ ಬಸ್​ ನಿಲ್ಲಿಸಿದ್ದಾರೆ. ಒಂದು ವೇಲೆ ಹಾಗೇ ಬಸ್ ರನ್ನಿಂಗ್ ಇದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.

RELATED ARTICLES
- Advertisment -
Google search engine

Most Popular