ಶ್ರೀ ಬೊಬ್ಬರ್ಯ, ಶ್ರೀ ಅಮ್ಮ ಹಾಗೂ ಸಪರಿವಾರ ದೈವಸ್ಥಾನ ಶ್ರೀ ಕ್ಷೇತ್ರ ಹೊಸಕಳಿ, ಜಾಲಾಡಿ,ಗೆಂಡಸೇವೆ ಮತ್ತು ವಾರ್ಷಿಕ ಹಬ್ಬದ ಸಂಭ್ರಮದಲ್ಲಿ ನಡೆಯಿತು.
ದಿನಾಂಕ 18-01-2025ನೇ ಶನಿವಾರ ಬೆಳಿಗ್ಗೆ ಕ್ಷೇತ್ರದ ನಾಗದೇವರ ಸನ್ನಿಧಿಯಲ್ಲಿ ಪವಮಾನ ಕಲಶ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ಮಾತ್ತು ಸಂಜೆ ಶ್ರೀ ಬೊಬ್ಬರ್ಯ ಹಾಗೂ ಸಪರಿವಾರ ದೈವಗಳಿಗೆ ನವಕ ಅಧಿವಾಸ ಹೋಮ, ಕಲಾಭಿವೃದ್ಧಿ ಹೋಮ ನೆರವೇರಿತು.
ತಾ.19-01-2025ನೇ ಭಾನುವಾರ ಬೆಳಿಗ್ಗೆ ಶ್ರೀ ಅಮ್ಮನವರಿಗೆದುರ್ಗಾ ಹೋಮ ಹಾಗೂ
ರಾತ್ರಿ ಹಣ್ಣು ಕಾಯಿ ಸೇವೆ, ಮಂಗಳಾರತಿ, ಮಹಾಮಂಗಳಾರತಿ, ಬಳಿಕ ದೈವದರ್ಶನ, ಗೆಂಡಸೇವೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆರಾತ್ರಿ ಗೆಂಡ ಸೇವೆ ನಡೆಯಿತು
ಶ್ರೀಮತಿ ಮೂಕಾಂಬಿಕಾ ದೇವಾಡಿಗ ಹಾಗೂ ಮಕ್ಕಳು ಅಂಬಿಕಾ ಆಶ್ರಯ, ಎನ್.ಜಿ.ಓ. ಕಾಲೋನಿ, ಬೈಲೂರು ಉಡುಪಿ ಅನ್ನದಾನದ ಸೇವಕರ್ತರುದಿನಾಂಕ 20 ರಂದುಬೆಳಿಗ್ಗೆ ದೇವರಿಗೆ ಮಂಗಳಾರತಿ, ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ ಹಣ್ಣುಕಾಯಿ ಸಮರ್ಪಣೆ, 7 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, 7.30ಕ್ಕೆ ಗೆಂಡಸೇವೆ, 8 ಗಂಟೆಗೆ ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ, ಸಾನಿಧ್ಯದಲ್ಲಿ ಸಂಪನ್ನಗೊಂಡಿತು.
ಶ್ರೀಮತಿ ಚೆಂದು ದೇವಾಡಿಗ ಮೆಕ್ಕಿಮನೆ, ನಾಗೂರು, ಕು| ಮಂಜುಳಾ, ಮೆಕ್ಕಿಮನೆ, ನಾಗೂರು, ಅನ್ನದಾನ ಸೇವಕರ್ತರು.ರಾತ್ರಿ ಶ್ರೀ ಬೊಬ್ಬರ್ಯ ಸೇವಾ ಸಮಿತಿ ವತಿಯಿಂದ ಮಂದಾರ್ತಿ ಮೇಳ ಪ್ರಧಾನ ಹಾಸ್ಯಗಾರ ಮಹಾಬಲ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ನಂತರ ಶ್ರೀ ಬೊಬ್ಬರ್ಯ ಯಕ್ಷಗಾನ ಕಲಾ ಸಂಘದ ವತಿಯಿಂದ ರಾಜ ರುದ್ರಕೋಪ ಎಂಬ ಪೌರಾಣಿಕ ಪ್ರಸಂಗ ಜರಗಿತು.
ರಾಘವೇಂದ್ರ ಅವರು ಮಾತನಾಡಿ ಈ ದೇವಸ್ಥಾನವು ಸುಮಾರು 800 ವರ್ಷ ಇತಿಹಾಸ ಹೊಂದಿದ್ದು ಘಟದ ತುದಿಯಿಂದ ಕರಾವಳಿ ತನಕ ಹಲವಾರು ಕುಟುಂಬಗಳು ನಂಬಿಕೊಂಡು ಬಂದಂತಹ ಕಾರಣಿಕ ಕ್ಷೇತ್ರ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಆಡಳಿತ ಮೂಕ್ತೇಸರರು ನಾಲ್ಕು ಕುಟುಂಬದವರು ಮತ್ತು ಅಧ್ಯಕ್ಷರು ಹಾಗೂ ಸದಸ್ಯರು ಆಡಳಿತ / ಜೀರ್ಣೋದ್ಧಾರ ಸಮಿತಿ ಶ್ರೀ ಬೊಬ್ಬರ್ಯ, ಶ್ರೀ ಅಮ್ಮ ಹಾಗೂ ಸಪರಿವಾರ ದೈವಸ್ಥಾನ, ಶ್ರೀ ಕ್ಷೇತ್ರ ಹೊಸಕಳಿ ನಂಬಿದ ಕುಟುಂಬಸ್ಥರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.