Tuesday, June 18, 2024
Homeಮಂಗಳೂರುಬೊಳಿಯಾರ್‌ ಚೂರಿ ಇರಿತ ಪ್ರಕರಣ | ಪ್ರಚೋದನಾರಿ ಘೋಷಣೆ ಕೃತ್ಯಕ್ಕೆ ಕಾರಣ: ಪೊಲೀಸ್‌ ಆಯುಕ್ತ

ಬೊಳಿಯಾರ್‌ ಚೂರಿ ಇರಿತ ಪ್ರಕರಣ | ಪ್ರಚೋದನಾರಿ ಘೋಷಣೆ ಕೃತ್ಯಕ್ಕೆ ಕಾರಣ: ಪೊಲೀಸ್‌ ಆಯುಕ್ತ

ಮಂಗಳೂರು: ನಗರದ ಹೊರವಲಯದ ಕೊಣಾಜೆ ಪೊಲೀಸ್‌ ಠಾಣೆ ವ್ಯಾಪ್ತಿಯ ಬೊಳಿಯಾರ್‌ನಲ್ಲಿ ನಡೆದಿದ್ದ ಚೂರಿ ಇರಿತ ಘಟನೆಗೆ ಪ್ರಚೋದನಕಾರಿ ಘೋಷಣೆ ಕಾರಣ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ತಿಳಿಸಿದ್ದಾರೆ. ಬೊಳಿಯಾರಿನಲ್ಲಿ ವಿಜಯೋತ್ಸವ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಮುಸ್ಲಿಂ ಯುವಕರ ತಂಡವೊಂದು ಚೂರಿ ಇರಿದ ಪ್ರಕರಣ ವರದಿಯಾಗಿತ್ತು.
ಮೆರವಣಿಗೆ ಮುಗಿಸಿ ಭಾರತ್‌ ಮಾತಾ ಕಿ ಜೈ ಘೋಷಣೆ ಕೂಗಿರುವುದು ನಿಜ. ಆದರೆ ಇದರಿಂದ ಪ್ರಚೋದನೆಗೊಂಡಿಲ್ಲ, ಆದರೆ ಇದಕ್ಕೂ ಮೊದಲು ಮೆರವಣಿಗೆಯಲ್ಲಿ ಆಟೊ ನಿಲ್ದಾಣದ ಬಳಿ ಪಾಕಿಸ್ತಾನಕ್ಕೆ ಸಂಬಂಧ ಕಲ್ಪಿಸಿ ಘೋಷಣೆ ಕೂಗಲಾಗಿದೆ. ಇದು ಸೋಶಿಯಲ್‌ ಮೀಡಿಯಾದ ಮೂಲಕ ಮುಸ್ಲಿಂ ಸಮುದಾಯದವರಿಗೆ ಗೊತ್ತಾಗಿದೆ. ಇದರಿಂದ ಪ್ರಚೋದನೆಗೊಂಡು ಕೆಲವರು ಈ ಕೃತ್ಯ ಎಸಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಕರದಲ್ಲಿ 20 ಆರೋಪಿಗಳ ಪೈಕಿ ಇಲ್ಲಿವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ. ಚೂರಿ ಇರಿದವರಲ್ಲಿ ಒಬ್ಬ ರೌಡಿ ಶೀಟರ್‌ ಕೂಡ ಇದ್ದ. ಪ್ರಚೋದನಕಾರಿ ಘೋಷಣೆ ಕೂಗಿದವರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular