ಮುಂಬೈ: ಒಂದು ದಿನದ ಹಿಂದೆಯಷ್ಟೇ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಬಾಲಿವುಡ್ ನಟಿ ರಾಗಿಣಿ ಖನ್ನಾ ತನ್ನ ತಪ್ಪಿನ ಅರಿವಾಗಿ ಮತ್ತೆ ಹಿಂದೂ ಧರ್ಮಕ್ಕೆ ವಾಪಾಸ್ಸಾಗಿದ್ದಾರೆ. ಒಂದು ದಿನದ ಹಿಂದೆಯಷ್ಟೇ ರಾಗಿಣಿ ಖನ್ನಾ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು. ಈ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆದರೆ ಅದಕ್ಕೆ ಸಾಕಷ್ಟು ಟೀಕೆ, ಕಮೆಂಟ್ ಗಳು ಬಂದಿದ್ದವು. ಹೀಗಾಗಿ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಕ್ಕೆ ಕ್ಷಮೆ ಕೋರಿದ್ದಾರೆ. ಸನಾತನ ಧರ್ಮವೇ ಶ್ರೇಷ್ಠವೆಂದು ಅವರು ಹೇಳಿಕೊಂಡಿದ್ದಾರೆ.
ಮತಾಂತರ ಕುರಿತ ಪೋಸ್ಟ್ ಅನ್ನು ಅವರು ಡಿಲಿಟ್ ಮಾಡಿದ್ದಾರೆ.