ಮಂಗಳೂರಿನ ಬಗ್ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇಮೇಲ್ ಬಂದಿದೆ. ಎಪ್ರಿಲ್ 29ರಂದು ಮಂಗಳೂರಿನ ವಿಮಾನ ನಿಲ್ದಾಣ ಪ್ರಾಧಿಕಾರದ ಕಚೇರಿಗೆ ಮೇಲ್ ಬಂದಿದ್ದು, ಈ ಬಗ್ಗೆ ಬಜೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಉಗ್ರರ ಹೆಸರಿನಲ್ಲಿ ಇಮೇಲ್ ಸಂದೇಶ ಬರೆಯಲಾಗಿದ್ದು, ಏರ್ಪೋಟ್ ಆವರಣದಲ್ಲಿ ಸ್ಪೋಟಕಗಳನ್ನು ಇಟ್ಟಿದ್ದೇನೆ. ಎಲ್ಲಿಯೂ ಕಾಣಿಸಿಕೊಳ್ಳದ ರೀತಿಯಲ್ಲಿ ಬಾಂಬ್ ಇಟ್ಟಿದ್ದೇನೆ. ಅಲ್ಲದೆ. ಕೆಲವು ವಿಮಾನಗಳಲ್ಲಿಯೂ ಮೂರು ಸ್ಪೋಟಕ ಸಾಮಗ್ರಿಗಳನ್ನು ಇಟ್ಟಿದ್ದೇನೆ. ಕೆಲವೇ ಗಂಟೆಗಳಲ್ಲಿ ಅದು ಸ್ಫೋಟಗೊಳ್ಳಲಿದ್ದು, ದೊಡ್ಡ ಮಟ್ಟದ ರಕ್ತಪಾತ ಆಗಲಿದೆ. ಹೆಚ್ಚು ಜನ ಸಾಯುವುದನ್ನು ನಿರೀಕ್ಷೆ ಮಾಡುತ್ತೇವೆ. ಟೆರರೈಜರ್ಸ್ 111 ಎನ್ನುವ ಗ್ರೂಪ್ ಇದರ ಹಿಂದಿದೆ. ಇದು ಕೇವಲ ಬೆದರಿಕೆ ಅಲ್ಲ, ಟೆರರೈಸರ್ಸ್ 111 ಈ ರಕ್ತಪಾತದ ಹಿಂದೆ ಇದೆ ಎಂಬುದಾಗಿ ಇಂಗ್ಲಿಷಿನಲ್ಲಿ ಬೆದರಿಕೆ ಹಾಕಲಾಗಿದೆ.
ಎಪ್ರಿಲ್ 29ರಂದು ಬೆದರಿಕೆ ಪತ್ರ ಬಂದಿದ್ದು, ಇದು ತಿಳಿಯುತ್ತಲೇ ವಿಮಾನ ನಿಲ್ದಾಣದ ಅಧಿಕಾರಿಗಳು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೇಲಧಿಕಾರಿಗಳ ಸೂಚನೆಯಂತೆ, ಬಟ್ಟೆ ಠಾಣೆಯಲ್ಲಿ ಬೆದರಿಕೆ ಸಂದೇಶದ ಬಗ್ಗೆ ಪ್ರಕರಣ ದಾಖಲಾಗಿದೆ. ಆದರೆ, ಈ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಸುದ್ದಿ ಹಂಚಿಕೊಂಡಿಲ್ಲ. ಬೆದರಿಕೆ ಪತ್ತ ಬಂದಿರುವುದನ್ನು ಗೌಪ್ಯವಾಗಿಟ್ಟು ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.