spot_img
22.6 C
Udupi
Monday, January 30, 2023
spot_img
spot_img
spot_img

ಉಡುಪಿಯ ಶ್ರೀ ಕೃಷ್ಣ ಮಠ ಕ್ಕೂ ಟಾರ್ಗೆಟ್ ಮಾಡಿದ್ನ ಬಾಂಬರ್ ಶಾರಿಕ್

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಶಾರಿಕ್, ಉಡುಪಿ ಬಂದಿದ್ದಾ, ಉಡುಪಿಯ ಶ್ರೀ ಕೃಷ್ಣ ಮಠ ಈತನ ಟಾರ್ಗೆಟ್ ಲೀಸ್ಟ್‌ನಲ್ಲಿ ಇತ್ತಾ ಎನ್ನುವ ಅನುಮಾನ ಮೂಡುತ್ತಿದೆ.

ಶಾರಿಕ್ ತನಿಕೆ ನಡೆಸುತ್ತಿರುವ ಮಂಗಳೂರು ಪೊಲೀಸರು ಇದೇ ವಿಚಾರವಾಗಿ ಉಡುಪಿಗೆ ಬಂದಿದ್ದು, ಉಡುಪಿಯ ಹಲವೆಡೆ ಮಂಗಳೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಅಕ್ಟೋಬರ್ 11ರಂದು ಕೃಷ್ಣಮಠ ಹಾಗೂ ರಥಬೀದಿಯಲ್ಲಿ ಸುತ್ತಾಡಿದ ಬಗ್ಗೆ ಶಂಕೆಯಿದ್ದು, ರಥಬೀದಿಯಿಂದ ಮಾಡಿದ ಮೊಬೈಲ್ ಫೋನ್ ಕರೆಯಿಂದ ವಿಷಯ ಬಯಲಿಗೆ ಬಂದಿದೆ. ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಶಾರಿಕ್ ಕೈಯಿಂದ ಮೊಬೈಲ್ ಪಡೆದು ಕರೆ ಮಾಡಿದ್ದರು ಎನ್ನಲಾಗಿದೆ.
ಹೀಗಾಗಿ ಕೃಷ್ಣ ಮಠದ ಸಿಸಿ ಟಿವಿ ಪರಿಶೀಲನೆ ನಡೆಸಿದ್ದಾರೆ. ದುರದೃಷ್ಟವಶಾತ್ ಅಂದ್ರೆ ಪೊಲೀಸರಿಗೆ ಯಾವುದೇ ದೃಶ್ಯಾವಳಿ ಲಭ್ಯವಾಗಿಲ್ಲ. ಹೀಗಾಗಿ ಉಡುಪಿಯ ರಥ ಬೀದಿ ಆಸುಪಾಸಿನ ಸಿಸಿಟಿವಿ ಫೂಟೇಜ್‌ಗಳನ್ನು ಮಂಗಳೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ..

Related Articles

Stay Connected

0FansLike
3,687FollowersFollow
0SubscribersSubscribe
- Advertisement -

Latest Articles