Wednesday, September 11, 2024
Homeರಾಜ್ಯಉಡುಪಿ ಪತ್ರಕರ್ತರ ಸಂಘದ ಗ್ರಂಥಾಲಯಕ್ಕೆ ಆರ್ ಆರ್ ಸಿಯಿಂದ ಪುಸ್ತಕ ಕೊಡುಗೆ

ಉಡುಪಿ ಪತ್ರಕರ್ತರ ಸಂಘದ ಗ್ರಂಥಾಲಯಕ್ಕೆ ಆರ್ ಆರ್ ಸಿಯಿಂದ ಪುಸ್ತಕ ಕೊಡುಗೆ

ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಂಥಾಲಯಕ್ಕೆ ಸುಮಾರು 11 ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ಇಂದು ಕೊಡುಗೆಯಾಗಿ ನೀಡಲಾಯಿತು.

ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೇಂದ್ರದ ಆಡಳಿತಾಧಿಕಾರಿ ಡಾ.ಜಗದೀಶ್ ಶೆಟ್ಟಿ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅವರಿಗೆ ಪುಸ್ತಕಗಳನ್ನು ಹಸ್ತಾಂತರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಬಿ.ಬಿ.ಶೆಟ್ಟಿಗಾರ್, ಮೈಕಲ್ ರೊಡ್ರಿಗಸ್, ಅವಿನ್ ಶೆಟ್ಟಿ, ಜನಾರ್ದನ ಕೊಡವೂರು, ನಿತೀಶ್ ಮಂಚಿ, ರಕ್ಷಿತ್ ಬೆಳಪು, ಕೇಂದ್ರದ ವೆಂಕಟೇಶ, ಗುರುರಾಜ್ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಪುಂಡಲೀಕ ಮರಾಠೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular