ಅರಂತೋಡು: ಅಣ್ಣ ನಿಧನರಾದ ಸುದ್ದಿ ತಿಳಿದು ತಮ್ಮನೂ ಕುಸಿದು ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಅರಂತೋಡು ಗ್ರಾಮದ ನಿವಾಸಿ 82ರ ಹರೆಯದ ಅಬ್ದುಲ್ಲ ಅಸೌಖ್ಯದಿಂದ ಏ.30ರಂದು ಮುಂಜಾನೆ ನಿಧನ ಹೊಂದಿದರು.
ವಿಷಯ ತಿಳಿಯುತ್ತಿದ್ದಂತೆ ಉದಯ ನಗರದ ನಿವಾಸಿ ಸಹೋದರ 76ನೇ ವಯಸ್ಸಿನ ಮಹಮ್ಮದ್ ಮನೆಯಲ್ಲಿ ಕುಸಿದುಬಿದ್ದರು. ತಕ್ಷಣ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಬಂದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.