Saturday, April 19, 2025
Homeರಾಜ್ಯರಾಷ್ಟ್ರಭಕ್ತ ಬಳಗ ಬೈಂದೂರು ವತಿಯಿಂದ ಮೇ.01 ರಂದು ಕಿರಿಮಂಜೇಶ್ವರದಲ್ಲಿ ಬ್ರಹತ್ ವಿಜಯ ಸಂಕಲ್ಪ ಸಮಾವೇಶ

ರಾಷ್ಟ್ರಭಕ್ತ ಬಳಗ ಬೈಂದೂರು ವತಿಯಿಂದ ಮೇ.01 ರಂದು ಕಿರಿಮಂಜೇಶ್ವರದಲ್ಲಿ ಬ್ರಹತ್ ವಿಜಯ ಸಂಕಲ್ಪ ಸಮಾವೇಶ

ಬೈಂದೂರು; ರಾಷ್ಟ್ರಭಕ್ತ ಬಳಗ ಬೈಂದೂರು ಇದರ ವತಿಯಿಂದ ಕಿರಿಮಂಜೇಶ್ವರದಲ್ಲಿ ಬ್ರಹತ್‌ ವಿಜಯ ಸಂಕಲ್ಪ ಸಮಾವೇಶ ಮೇ.01 ರಂದು ಬೆಳಿಗ್ಗೆ 10:30ಕ್ಕೆ ಕಿರಿಮಂಜೇಶ್ವರದಲ್ಲಿ ನಡೆಯಲಿದೆ ಎಂದು ರಾಷ್ಟ್ರಭಕ್ತ ಬಳಗದ ಮುಖಂಡ ಕೃಷ್ಣ ಬಿಜೂರು ಹೇಳಿದರು ಅವರು ರಾಷ್ಟ್ರಭಕ್ತ ಬಳಗ ಕಾರ್ಯಾಲಯ ಉಪ್ಪುಂದದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಮೇ.01 ರಂದು ಈಶ್ವರಪ್ಪ ಬಳಗದ ವತಿಯಿಂದ ಬ್ರಹತ್ ವಿಜಯ ಸಂಕಲ್ಪ ಸಮಾವೇಶ ಕಿರಿಮಂಜೇಶ್ವರದಲ್ಲಿ ನಡೆಯಲಿದೆ. ಮಹಿಳೆಯರು,ಕಾರ್ಮಿಕ ರು,ಹಿಂದೂ ಮುಖಂಡರು ಸೇರಿದಂತೆ ಹತ್ತು ಸಾವಿರಕ್ಕೂ ಅಧಿಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಮಿಕರಿಗೆ ಸಮ್ಮಾನ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿಕೆ.ಎಸ್.ಈಶ್ವರಪ್ಪ ರವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮೋಹನ ಖಾರ್ವಿ ಉಪ್ಪುಂದ,ವಿನೋದ ರಾಜ್ ಖಾರ್ವಿ,ಉಮೇಶ ಬಿಜೂರು, ಜಗದೀಶ ಖಾರ್ವಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular