Saturday, September 14, 2024
Homeರಾಜಕೀಯಬ್ರಹ್ಮ ಬಂದು ಹೇಳಿದರು ಈ ಚುನಾವಣೆಯಿಂದ ಹಿಂದೆ ಸರಿಯಲಾರೆ: ಈಶ್ವರಪ್ಪ

ಬ್ರಹ್ಮ ಬಂದು ಹೇಳಿದರು ಈ ಚುನಾವಣೆಯಿಂದ ಹಿಂದೆ ಸರಿಯಲಾರೆ: ಈಶ್ವರಪ್ಪ

ಬೈಂದೂರು: ಕಳೆದ 40 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ತೊಡಗಿಸಿಕೊಂಡಿದ್ದೇನೆ ಪಕ್ಷ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸಿ ಕಳೆದ ಚುನಾವಣೆಯಲ್ಲಿ ಪಕ್ಷದ ಮುಖಂಡರ ಮಾತಿಗೆ ಚಕಾರವೆತ್ತದೆ ರಾಜಕೀಯ ನಿವೃತ್ತಿ ಘೋಷಿಸಿದೆ. ಈ ಲೋಕಸಭಾ ಚುನಾವಣೆಯಲ್ಲಿ ಪುತ್ರನಿಗೆ ಹಾವೇರಿಯಿಂದ ಟಿಕೆಟ್ ಕೇಳಿದ್ದೆ ಆದರೆ ಯಡಿಯೂರಪ್ಪ ಕೇವಲ ತನ್ನ ಕುಟುಂಬದ ಮಮತೆಯಿಂದ ಹಿಂದುಳಿದ ನಾಯಕ ಬೆಳೆಯಬಾರದೇನ್ನುವ ಉದ್ದೇಶದಿಂದ ಹೊಂದಾಣಿಕೆಯ ರಾಜಕೀಯ ಮಾಡಿಕೊಂಡಿದ್ದಾರೆ ಶೋಭಾ ಕರಂದ್ಲಾಜೆಗೆ ಚಿಕ್ಕಮಂಗಳೂರಿನ ಜನ ಗೋ ಬ್ಯಾಕ್ ಶೋಭಾ ಎಂದಾಗ ಬದಲಿ ಕ್ಷೇತ್ರ ಒದಗಿಸುವ ಇವರು ತಮ್ಮ ಮಕ್ಕಳ ಮಮತೆಯಲ್ಲಿ ನನಗೆ ಅನ್ಯಾಯ ಮಾಡಿದ್ದಾರೆ ನಾನು ಹಿಂದುತ್ವವನ್ನು ಉಸಿರಾಗಿಸಿಕೊಂಡ ರಾಜಕಾರಣಿ ಈ ಚುನಾವಣೆಯಲ್ಲಿ ಹಿಂದುತ್ವ ದೇಶ ಅಭಿವೃದ್ಧಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಕುರಿತು ಜನ ಸ್ಪಷ್ಟ ಫಲಿತಾಂಶ ನೀಡಲಿದ್ದಾರೆ.ಯಾವ ಒತ್ತಡಗಳಿಗೂ ಮಣಿಯಲಾರೆ. ಬ್ರಹ್ಮ ಬಂದು ಹೇಳಿದರು ಈ ಚುನಾವಣೆಯಿಂದ ಹಿಂದೆ ಸರಿಯಲಾರೆ ಎಂದು ಈಶ್ವರಪ್ಪ ಹೇಳಿದರು.ಅವರು ಉಪ್ಪಂದದಲ್ಲಿ ರವಿವಾರ ಉಪ್ಪುಂದ ಪರಿಚಯ ಹೋಟೆಲ್ ಸಭಾಭವನದಲ್ಲಿ ನಡೆದ ಈಶ್ವರಪ್ಪ ಬೆಂಬಲಿತ ಕಾರ್ಯಕರ್ತರ ಸಮಾವೇಶವನ್ನುದೇಶಿಸಿ ಮಾತನಾಡಿದರು.

ಬಿಜೆಪಿ ಬಳಗಕ್ಕೆ ಶಾಕ್ ಕೊಟ್ಟ ಈಶ್ವರಪ್ಪ:ಯಡಿಯೂರಪ್ಪ ವಿರುದ್ಧ ಬಂಡಾಯ ಸಾರಿದ ಈಶ್ವರಪ್ಪ ಬಣಕ್ಕೆ ಬೈಂದೂರಿನಲ್ಲಿ ಜನಬೆಂಬಲ ದೊರೆಯದೇನ್ನುವ ಬಿಜೆಪಿಯವರ ಚಿಂತನೆಗೆ ಬಾನುವಾರದ ಸಮಾವೇಶ ಶಾಕ್ ಕೊಟ್ಟಿದೆ. ಕ್ಕಿಕ್ಕಿರಿದು ಸೇರಿದ ಕಾರ್ಯಕರ್ತರ ದಂಡು ಹಾಗೂ ಅಪಾರ ಜನಸ್ತೋಮ ಈಶ್ವರಪ್ಪ ಬಳಗದ ಹುಮ್ಮಸ್ಸು ಹೆಚ್ಚಿಸಿದೆ. ಬಿಜೆಪಿ ಹಾಗೂ ಸಂಘ ಪರಿವಾರದ ಬಹುತೇಕ ಕಾರ್ಯಕರ್ತರು ಈಶ್ವರಪ್ಪ ಸಮಾವೇಶದ ಜವಬ್ದಾರಿ ವಹಿಸಿಕೊಂಡಿದ್ದರು. ದೇಶಕ್ಕೆ ಮೋದಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಹಿಂದುತ್ವದ ನಾಯಕ ಈಶ್ವರಪ್ಪ ಎನ್ನುವ ಪರಿಕಲ್ಪನೆಯಲ್ಲಿ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಕಾಂತೇಶ್‌ ಈಶ್ವರಪ್ಪ, ಸಂಘಟಕ ಶ್ರೀಧರ ಬಿಜೂರು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಗೋಪಾಲಕೃಷ್ಣ ನಾಡ, ತಾಲೂಕು ಪಂಚಾಯತ್‌ ಮಾಜಿ ಸದಸ್ಯ ನಾರಾಯಣ ಗುಜ್ಜಾಡಿ, ಗೋಪಾಲಗಾಣಿಗ ಬೈಂದೂರು, ಸುವರ್ಣ ಪೂಜಾರಿ ಬಿಜೂರು, ಹಿಂದೂ ಜಾಗರಣೆಯ ಅಧ್ಯಕ್ಷ ಯಶವಂತ ಗಂಗೊಳ್ಳಿ, ವಿನಯ್ ನಾಯರಿ ನಾವುಂದ, ಮಂಜುನಾಥ ರಾವ್ ಬೈಂದೂರು, ಗಣೇಶ್ ಬೈಂದೂರು ಇನ್ನಿತರರು ಉಪಸ್ಥಿತರಿದ್ದರು. ಶ್ರೀಧ‌ರ್ ಬಿಜೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೋಪಾಲಕೃಷ್ಣ ನಾಡ ವಂದಿಸಿದರು.

RELATED ARTICLES
- Advertisment -
Google search engine

Most Popular