ಬೈಂದೂರು:ಹೆಮ್ಮಾಡಿ ಶ್ರೀಲಕ್ಷ್ಮೀನಾರಾಯಣ ನೂತನ ಶಿಲಾಮಯ ಗುಡಿಯಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ಲಕ್ಷ್ಮೀನಾರಾಯಣ ದೇವರಿಗೆ ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದ ಪೀಠಾಧೀಶ್ವರರಾದ ಶ್ರೀಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮಿಗಳು ಬ್ರಹ್ಮಕುಂಭಾಭಿಷೇಕ ನೆರವೇರಿಸಿ, ರಜತ ಕವಚವನ್ನು ಸಮರ್ಪಿಸಿದರು.
ಶ್ರೀಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮಿಗಳು ಅನುಗ್ರಹ ಭಾಷಣವನ್ನು ನೆರವೇರಿಸಿ ಮಾತನಾಡಿ, ಒಂದೊಂದು ಶಿಲೆಯೂ ಭಕ್ತರ ಸೇವೆಯ ಪ್ರತೀಕವಾದದ್ದು.ಮನುಷ್ಯನಿಗೆ ಜೀವನದಲ್ಲಿ ಭಗವಂತನ ಅನುಗ್ರಹ ಅತ್ಯಂತ ಅವಶ್ಯಕ. ದೇವರ ಆರಾಧನೆಯಿಂದ ಸಜ್ಜನನಾಗಿ ಬದುಕಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೀತಾನಂದ ಫೌಂಡೇಶನ್‍ನ ಪ್ರವರ್ತಕ ಆನಂದ ಸಿ. ಕುಂದರ್, ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ಕುಶಲ ಶೆಟ್ಟಿ, ದಾನಿಗಳಾದ ಜಗದೀಶ ಶೆಟ್ಟಿ ಕುದ್ರುಕೋಡು,ಎನ್.ಟಿ. ಪೂಜಾರಿ,ಸುನಿಲ್ ಪೂಜಾರಿ, ಪುಷ್ಪಲತಾ ರಾವ್, ರಾಮ ಪೂಜಾರಿ,ಶಿವರಾಮ ದೇವಾಡಿಗ,ವೀರೇಶ್ ಪೂಜಾರಿ, ಭಾಸ್ಕರ ಸಿ. ಮೊಗವೀರ, ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ,ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಭಟ್, ಸದಸ್ಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು. ಸತ್ಯನಾರಾಯಣ ರಾವ್,ಸದಸ್ಯರು,ಬ್ರಹ್ಮಕುಂಭಾಭಿಷೇಕ ಸಮಿತಿಯ ಪ್ರಮುಖರು, ಸಂಚಾಲಕರು, ಪದಾಧಿಕಾರಿಗಳು,ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಜೋತಿಷಿ, ಪಂಚಾಂಗಕರ್ತ ವಾಸುದೇವ ಜೋಯಿಸ ತಟ್ಟುವಟ್ಟು ಹಾಲಾಡಿ ಪ್ರಸ್ತಾವಿಸಿದರು.
ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ಕುಶಲ ಶೆಟ್ಟಿ ಸ್ವಾಗತಿಸಿದರು. ವಕೀಲ ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕುಲಾಲ್ ವಂದಿಸಿದರು.