ಹೆಬ್ರಿ, ಜ. 5: ಬೆಳ್ಳರ್ಪಾಡಿ ಶ್ರೀ ಮಹಾ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಜ.6ರಿಂದ ಜ.18ರವರೆಗೆ ನಡೆಯಲಿರುವ ನೂತನ ಧ್ವಜಸ್ತಂಭ, ಮಹಾಬಲಿಪೀಠ ಪ್ರತಿಷ್ಠೆ ರಾಜಗೋಪುರ ಸಮರ್ಪಣಾಪೂರ್ವಕ ಬ್ರಹ್ಮಕಲ ಶೋತ್ಸವ ಕಾರ್ಯಕ್ರಮದ ಅಂಗವಾಗಿ ಜ.5ರಂದು ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ
ಹಸುರುವಾಣಿ ಹೊರೆಕಾಣಿಕೆ ಮೆರ ವಣಿಗೆಗೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ 23. ಭುಜಂಗ ಶೆಟ್ಟಿ ಹಾಗೂ ಬೆಳ್ಳರ್ಪಾಡಿ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿವರಾಮ ಶೆಟ್ಟಿ ಚಾಲನೆ ನೀಡಿದರು.
ಮೆರವಣಿಗೆಯ ಮೊದಲು ಪೆರ್ಡೂರು ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಭಜನ
ತಂಡಗಳಿಂದ ಭಜನೆ, ಚೆಂಡೆ ನಾದ, ಕೊಂಬು ವಾದ್ಯ, ಜಾನಪದ ಕಲಾ ತಂಡ ಮೊದಲಾದ ಸಂಸ್ಕೃತಿಕ ತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜೇತ್ ಕುಮಾರ್, ಜಗದೀಶ್ ನಾಯಕ್, ಸದಸ್ಯರಾದ ಲಕ್ಷ್ಮೀನಾರಾಯಣ ಭಟ್, ರೋಹಿತ್ ಶೆಟ್ಟಿಸದಾಶಿವ ಸಾಲಿಯನ್, ಜಯಲಕ್ಷ್ಮೀ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಜ.6ರಿಂದ ಬ್ರಹ್ಮ ಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಜ.7ರ ಬೆಳಗ್ಗೆ ಮಹಾ ಬಲಿಪೀಠ ಪ್ರತಿಷ್ಠೆ ಮಹಾ ಬಲಿಪೀಠ ಕಲಶಾಭಿಷೇಕ, ಪ್ರಸನ್ನ ಪೂಜೆ, ಜ.8ರ ಬೆಳಗ್ಗೆ 10.24ಕ್ಕೆ ಧ್ವಜ ಬ್ರಹ್ಮಕಲಶಾ ಭಿಷೇಕ, ಜ.10ರಂದು ವಿಷ್ಣುಸಹಸ್ರನಾಮ ಪಾರಾಯಣ, ಜ.11ರಂದು ಅಶ್ವಮೇಧ ಸೂಕ್ತ ಯಾಗ ಹಾಗೂ ಇತರ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.