ಶ್ರೀ ರಾಜರಾಜೇಶ್ವರಿ ಸದ್ಗುರು ಶ್ರೀ ನಿತ್ಯಾನಂದ ಕ್ಷೇತ್ರ ನೆಲ್ಲಿ ಅತ್ತೂರು ನಿಟ್ಟೆ 2025 ಜನವರಿ 28 ರಿಂದ ಫೆಬ್ರವರಿ 05 ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಡಿಸೆಂಬರ್ 13 ಶುಕ್ರವಾರ ಸಂಜೆ 7 ಗಂಟೆಗೆ ಕ್ಷೇತ್ರದಲ್ಲಿ ನಡೆಯಿತು. ದತ್ತಜಯಂತಿ ಅಂಗವಾಗಿ ದತ್ತ ಪೂಜೆ ಹಾಗೂ ದತ್ತ ಹೋಮ ನಡೆಯಿತು. ಸುಮಾರು 90 ಜನ ಬಜರಂಗದಳ ಕಾರ್ಯಕರ್ತರು ದತ್ತ ಮಾಲಾಧಾರಿಗಳಾಗಿ ದತ್ತಪೀಠಕ್ಕೆ ಯಾತ್ರೆ ಹೊರಟರು.
ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ ಬಂಟ್ವಾಳ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ “ಕ್ಷೇತ್ರವು ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಇರುವುದರಿಂದ ಭಕ್ತರು ಕ್ಷೇತ್ರದ ಸಂಪೂರ್ಣ ಕಾರ್ಯದಲ್ಲಿ ಪಾಲ್ಗೊಂಡು ದೇವರ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗುವಂತೆ ಆಶೀರ್ವಚನ ನೀಡದರು. ಜನವರಿ 28 ರಿಂದ ವೈದಿಕ ಕಾರ್ಯಗಳು ನಡೆಯಲಿದೆ ಹಾಗೂ 30 ರಿಂದ ಫೆಬ್ರವರಿ 02 ರ ವರೆಗೆ ವಿವಿಧ ರೀತಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 03 ತಾರೀಕಿನಂದು ಬ್ರಹ್ಮಕಲಶೋತ್ಸವ ನಡೆದು 05 ತಾರೀಕಿಗೆ ದೈವಗಳ ನೇಮೋತ್ಸವ ದೊಂದಿಗೆ ಸಂಪನ್ನಗೊಳ್ಳಲಿದೆ.
ಮುಖ್ಯ ಅತಿಥಿಗಳಾಗಿ ಕ್ರಿಯೇಟಿವ್ ವಿದ್ಯಾಸಂಸ್ಥೆಯ ಸಹ ಸಂಸ್ಥಾಪಕರಾದ ಶ್ರೀ ಡಾ. ಗಣನಾಥ್ ಶೆಟ್ಟಿ, ಸಾಮಾಜಿಕ ಮುಖಂಡರಾದ ಶ್ರೀ ನಿತ್ಯಾನಂದ ಪೈ ಕಾರ್ಕಳ, ವಿಶ್ವ ಹಿಂದೂ ಪರಿಷದ್ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಭಾಗವಹಿಸಿ ಮಾತನಾಡಿದರು. ದೇವಸ್ಥಾನದ ಆಡಳಿತ ಮೋಕ್ತೇಸರ ಸುನಿಲ್ ಕೆ ಆರ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಚೇತನ್ ನಾಯಕ್ ಪದವು, ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಸಹ ಕಾರ್ಯದರ್ಶಿ ಸುಧೀರ್ ನಿಟ್ಟೆ, ಬಜರಂಗದಳ ಕಾರ್ಕಳ ತಾಲೂಕು ಸಂಯೋಜಕ್ ಮನೀಶ್ ನಿಟ್ಟೆ ವೇದಿಕೆಯಲ್ಲಿ ಉಪಸ್ಥಿತಿ ಇದ್ದರು. ದೇವಸ್ಥಾನದ ಟ್ರಸ್ಟಿಗಳಾದ ಮಹಾಬಲ ಸುವರ್ಣ, ಸುಮಿತ್ ಕೌಡೂರು, ರಾಮಪ್ಪ ಕೆ. ಜಿ, ನಿತ್ಯಾನಂದ ಭಟ್, ಪ್ರವೀಣ್ ಸಾಲ್ಯಾನ್, ರಂಜಿತ್ ಹಾಗೂ ಪ್ರಮುಖರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾದರು.