ಪೋಸ್ಟ್ ಆಫೀಸ್ ಬ್ಯಾಲೆನ್ಸ್ ಹೇಳುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.31ರಂದು ಹೇಮಲತಾ ಎಂಬವರಿಗೆ ಅಪರಿಚಿತರು ಕರೆ ಮಾಡಿ ಪೋಸ್ಟ್ ಆಫೀಸ್ ಬ್ಯಾಲೆನ್ಸ್ ಹೇಳುವುದಾಗಿ ನಂಬಿಸಿ ಮೊಬೈಲ್‌ನಲ್ಲಿ ಫೋನ್ ಪೇ ಇದೆಯಾ ಎಂದು ಕೇಳಿದರು. ಬಳಿಕ ಅದರ ಪಾಸ್ವರ್ಡ್ ಪಡೆದು, ಹೇಮಲತಾ ಅವರ ಬ್ಯಾಂಕ್ ಖಾತೆಯಿಂದ ಒಟ್ಟು 1,19,316. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ಮೋಸ ಮಾಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.