ಪಾಟ್ನಾ: ಬಿಹಾರದಲ್ಲಿ ಇಂದು ಮತ್ತೊಂದು ಸೇತುವೆ ಕುಸಿದಿದೆ. ಕಳೆದ 15 ದಿನಗಳಲ್ಲಿ ಇದು 10ನೇ ಸೇತುವೆ ಕುಸಿತ ದುರ್ಘಟನೆ ಎಂದು ವರದಿಯಾಗಿದೆ.
ಸರನ್ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ಒಂದು ಸೇತುವೆ ಕುಸಿದಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಕಳೆದ 24 ಗಂಟೆಗಳಲ್ಲಿ ಇದು ಮೂರನೇ ಘಟನೆ ಎಂದು ಜಿಲ್ಲಾಧಿಕಾರಿ ಅಮನ್ ಸಮೀರ್ ತಿಳಿಸಿದ್ದಾರೆ.
ಬನೇಯಪುರ ಬ್ಲಾಕ್‌ನಲ್ಲಿರುವ ಗಂದಕಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಕಿರು ಸೇತುವೆಯು ಸರನ್‌ನ ಹಲವಾರು ಹಳ್ಳಿಗಳು ಹಾಗೂ ನೆರೆಯ ಸಿವಾನ್ ಜಿಲ್ಲೆಯನ್ನು ಸಂಪರ್ಕಿಸುತ್ತದೆ. ಬುಧವಾರ ಸರನ್ ಜಿಲ್ಲೆಯ ಜನತಾ ಬಜಾರ್ ಹಾಗೂ ಲಹಲಾದ್‌ಪುರ ಪ್ರದೇಶದ ಸೇತುವೆಗಳು ಕುಸಿದು ಬಿದ್ದಿದ್ದವು. ಈ ದುರ್ಘಟನೆಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.