ಜಿಲ್ಲೆಯಾದ್ಯಂತ ಮಳೆಯ ಮುನ್ನೆಚ್ಚರಿಕೆ ಇದ್ದು ಕುಲಶೇಖರದಿಂದ ಕಾರ್ಕಳ, ಪುಂಜಾಲಕಟ್ಟೆಯಿಂದ ಉಜಿರೆ ಮತ್ತು ಬಿ.ಸಿ.ರೋಡ್‌ನಿಂದ ಉಪ್ಪಿನಂಗಡಿವರೆಗಿನ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಶ್ರೀ ಮುಳ್ಳಯಿ ಮುಗಿಲನ್ ಅವರ ಬಳಿ ಮನವಿ ಮಾಡಿದ ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ.
ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಯವರು ಮಳೆನೀರು ಹರಿದು ಹೋಗಲು NHAI ಸೇರಿದಂತೆ ಸಂಬಂಧಪಟ್ಟ ಎಲ್ಲಾ ಏಜೆನ್ಸಿಗಳು ಪೂರ್ವಭಾವಿಯಾಗಿ ತಯಾರಿಗಳನ್ನು ನಡೆಸುತ್ತಿದೆ ಎಂಬ ಭರವಸೆ ನೀಡಿದರು.