Monday, July 15, 2024
Homeಮಂಗಳೂರುಮಾತೆರೆಗ್ಲಾ ಸೊಲ್ಮೆಲು… | ಸಂಸತ್ತಲ್ಲಿ ಮೊಳಗಿದ ತುಳು: ನೂತನ ಸಂಸದ ಬ್ರಿಜೇಶ್‌ ಚೌಟ ತುಳುನಾಡಿನ ದೈವ...

ಮಾತೆರೆಗ್ಲಾ ಸೊಲ್ಮೆಲು… | ಸಂಸತ್ತಲ್ಲಿ ಮೊಳಗಿದ ತುಳು: ನೂತನ ಸಂಸದ ಬ್ರಿಜೇಶ್‌ ಚೌಟ ತುಳುನಾಡಿನ ದೈವ ದೇವರ ಹೆಸರಲ್ಲಿ ಪ್ರಮಾಣ ವಚನ!

ನವದೆಹಲಿ: ಈ ಬಾರಿ ಸಂಸತ್ತಿನಲ್ಲಿ ತುಳು ಭಾಷೆಯ ಸದ್ದು ಕೂಡ ಮೊಳಗಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾಗಿರುವ ಕ್ಯಾ. ಬ್ರಿಜೇಶ್‌ ಚೌಟ ಸಂಸತ್ತಿನಲ್ಲಿ ತುಳುನಾಡಿನ ದೈವ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ತುಳುನಾಡಿಗೆ ಗೌರವ ಅರ್ಪಿಸಿದ್ದಾರೆ.
ಲೋಕಸಭೆಯಲ್ಲಿ ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸುವ ಕಾರ್ಯಕ್ರಮ ನಡೆಯಿತು. ಈ ವೇಳೆ ನೂತನ ಸಂಸದ ಬ್ರಿಜೇಶ್‌ ಚೌಟ ತುಳುನಾಡಿನ ವೇಷಭೂಷಣದಲ್ಲಿ ಕಂಗೊಳಿಸಿದರು. ಬಿಳಿ ಅಂಗಿ ಮತ್ತು ಬಿಳಿ ಲುಂಗಿಯನ್ನು ಧರಿಸಿದ್ದ ಬ್ರಿಜೇಶ್‌ ಚೌಟ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ತುಳುನಾಡಿನ ದೈವ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅಲ್ಲದೆ ಕೊನೆಯಲ್ಲಿ ಮಾತೆರೆಗ್ಲಾ ಸೊಲ್ಮೆಲು (ಎಲ್ಲರಿಗೂ ಧನ್ಯವಾದಗಳು) ಎನ್ನುವ ಮೂಲಕ ತುಳು ಭಾಷಾ ಪ್ರೇಮ ಮೆರೆದರು.

RELATED ARTICLES
- Advertisment -
Google search engine

Most Popular