ಲಂಡನ್: ಬ್ರಿಟನ್ ಸಂಸತ್ತಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಭಾರತ ಮೂಲದ ಸಂಸದರು ಆಯ್ಕೆಯಾಗಿದ್ದಾರೆ. ಶುಕ್ರವಾರ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಸುಮಾರು 26 ಮಂದಿ ಭಾರತದ ಮೂಲದವರು ನೂತನ ಸಂಸದರಾಗಿ ಗೆಲುವು ಸಾಧಿಸಿದ್ದಾರೆ ಎಂದು ವರದಿಗಳು ತಿಳಿಸಿದ್ದಾರೆ.
ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಯಾಕ್‌ಶೈರ್‌ನ ರಿಚ್‌ಮಂಡ್ ಮತ್ತು ನಾರ್ತಲೆಟ್ರೋನ್ ಕ್ಷೇತ್ರದಿಂದ ವಿಜಯ ಸಾಧಿಸಿದ್ದಾರೆ. ಮಾಜಿ ಗೃಹ ಕಾರ್ಯದರ್ಶಿಗಳಾದ ಸುಯೆಲ್ಲಾ ಬ್ರೇವ್‌ಮೆನ್ ಹಾಗೂ ಪ್ರೀತಿ ಪಟೇಲ್ ಕೂಡ ಗೆದ್ದಿದ್ದಾರೆ. ಸುನಕ್ ಸಂಪುಟದಲ್ಲಿ ಸಚಿವೆಯಾಗಿದ್ದ ಗೋವಾ ಮೂಲದ ಕ್ಲಾರಿ ಕುಟಿನ್ಹೋ, ಗಗನ್ ಮಹೀಂದ್ರಾ, ಶಿವಾನಿರಾಜ ಗೆದ್ದಿದ್ದಾರೆ.
ಲೇಬರ್ ಪಕ್ಷದಿಂದ ಅತಿಹೆಚ್ಚು ಭಾರತ ಮೂಲದ ಸಂಸದರು ಆಯ್ಕೆಯಾಗಿದ್ದಾರೆ. ಫೆಲ್ತಂ ಹಾಗೂ ಹೆಸ್ಟನ್ ಕ್ಷೇತ್ರದಿಂದ ಸೀಮಾ ಮಲ್ಹೋತ್ರಾ ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ. ವಲ್‌ಸಲ್ ಹಾಗೂ ಬ್ಲಾಕ್ಸ್‌ವಿಚ್‌ನಿಂದ ವಲೇರಿ ವಾಜ್, ವಿಗನ್‌ನಿಂದ ಲಿಸಾ ನ್ಯಾಂಡಿಯವರು ವಿಜಯಶಾಲಿಗಳಾಗಿದ್ದಾರೆ.
ಪ್ರೀತ್ ಕೌರ್ ಗಿಲ್, ತನ್‌ಮನ್‌ಜೀತ್ ಸಿಂಗ್ ದೇಶಿ ಬರ್ಮಿಂಗ್‌ಹ್ಯಾಮ್ ಮತ್ತು ಎಜ್‌ಬಾಸ್ಟನ್ ಹಾಗೂ ಸ್ಲೋ ಕ್ಷೇತ್ರದಿಂದ ಗೆದ್ದಿದ್ದಾರೆ. ಜಸ್ ಅತ್ವಾಲ್ (ಇಲ್‌ಫಡ್ ಸೌತ್), ಬಗ್ಗಿ ಶಂಕರ್ (ಡೆರ್ಬಿ ಸೌತ್), ಸತ್ವೀರ್ ಕೌರ್ (ಸೌಥಾಂಪ್ಟನ್ ಟೆಸ್ಟ್), ಹರ್‌ಪ್ರೀತ್ ಉಪ್ಪಲ್ (ಹಡ್ಡಸ್‌ಫೀಲ್ಡ್), ವರಿಂದರ್ ಜಸ್ (ವಲ್ವಹಾಮ್ಟನ್ ವೆಸ್ಟ್), ಗುರಿಂದರ್ ಜೋಸನ್ (ಸ್ಮೆತ್‌ವಿಕ್), ಕನಿಷ್ಕ ನಾರಾಯಣ (ಬೇಳಗ ಆಫ್ ಗ್ಲಮೋರ್ಗನ್), ಸೋನಿಯಾ ಕುಮಾರ್ (ಡಡ್ಲೆ), ಸುರೀನಾ ಬ್ರಕೆನ್‌ಬಿಜ್ (ವಲ್ವಹಾಮ್ಟನ್ ನಾರ್ತ್ ಈಸ್ಟ್), ಕೀರ್ತಿ ಎಂಟ್ವಿಸಲ್ (ಬೋಲ್ಟನ್ ನಾರ್ತ್ ಈಸ್ಟ್), ಜೀವನ್ ಸಂದೆರ್ (ಲಾಪ್ ಬರಹ್), ಸೋಜನ್ ಜೋಸೆಫ್ (ಆಶ್‌ಫರ್ಡ್) ಮುಂತಾದವರು ಲೇಬರ್ ಪಕ್ಷದಿಂದ ಗೆದ್ದಿದ್ದಾರೆ.
ಇಂಗ್ಲೆಂಡ್ ಚುನಾವಣೆ | ಬ್ರಿಟನ್ ಸಂಸತ್ತಿನಲ್ಲಿ ಇನ್ನು ಭಾರತೀಯರದ್ದೇ ಹವಾ! : ದಾಖಲೆಯ ಭಾರತೀಯ ಸಂಜಾತ ಸಂಸದರು ಆಯ್ಕೆ
RELATED ARTICLES