ಭಾರೀ ಗಾಳಿ ಮಳೆಗೆ ಉಡುಪಿ ವಿಧಾನಸಭಾ ಕ್ಷೇತ್ರದ ಕರ್ಜೆ ಗ್ರಾಮದ ಕುರ್ಪಾಡಿ ಭಾಗದಲ್ಲಿ ಸುಮಾರು 36 ಮನೆಗಳಿಗೆ ತೀವ್ರ ಹಾನಿಯಾಗಿದ್ದು, ಹಲವಾರು ಮರ, ವಿದ್ಯುತ್ ಕಂಬಗಳು ಬಿದ್ದು ಸಮಸ್ಯೆಯಾಗಿದೆ. ಕಡೇಕಾರ್ ಗ್ರಾಮದಲ್ಲೂ ಹಲವು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.
ಈಗಾಗಲೇ ಕಂದಾಯ ಇಲಾಖೆ, ಮೆಸ್ಕಾಂ, ಅಗ್ನಿಶಾಮಕ ದಳದ ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿದ್ದು, ಮನೆ ಹಾನಿಯಾದ ಸಂತ್ರಸ್ತರಿಗೆ ಗರಿಷ್ಠ ಪರಿಹಾರ ಶೀಘ್ರ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದು , ಪೂರ್ವ ನಿಗದಿ ಕಾರ್ಯಕ್ರಮದ ಹಿನ್ನಲೆ ಬೆಂಗಳೂರಿನಲ್ಲಿರುವ ಕಾರಣ ಶುಕ್ರವಾರ ಬೆಳಿಗ್ಗೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.
ಯಶ್ ಪಾಲ್ ಸುವರ್ಣ
ಶಾಸಕರು, ಉಡುಪಿ.