ಅಮರಾವತಿ: ಒಂದು ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಸ್ವಂತ ತಂಗಿಯನ್ನೆ ಕೊಂದು, ನಂತರ ಆಕೆಯ ಸಾವನ್ನು ಅಪಘಾತವೆಂಬಂತೆ ಬಿಂಬಿಸಿರುವ ದುರ್ಘಟನೆ ನೆರೆಯ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ರಿಯಲ್ ಎಸ್ಟೇಟ್ ಉದ್ಯಮಿಯಾದ 30 ವರ್ಷದ ಮಾಲಪತಿ ಅಶೋಕ್ ಕುಮಾರ್ ಅವರು ವಿಚ್ಛೇದಿತ ಮತ್ತು ಮಕ್ಕಳಿಲ್ಲದ ತನ್ನ ಸ್ವಂತ ತಂಗಿಯನ್ನು 1 ಕೋಟಿ ರೂಪಾಯಿ ವಿಮಾ ಮೊತ್ತಕ್ಕಾಗಿ 2024 ರ ಫೆಬ್ರವರಿ 2 ರಂದು ಪೊಡಿಲಿಯ ಪೆಟ್ರೋಲ್ ಬಂಕ್ ಬಳಿ ಕೊಲೆ ಮಾಡಿದ್ದ, ಸದ್ಯ ಆತನನ್ನು ಕೊಲೆ ಅಪರಾಧಕ್ಕಾಗಿ ಪ್ರಕಾಶಂ ಜಿಲ್ಲೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಭಾರೀ ಸಾಲದಿಂದ ಬಳಲುತ್ತಿದ್ದ ಕುಮಾರ್ ಅವರು, ತನ್ನ ಸಹೋದರಿಯ ಜೀವಕ್ಕೆ ಅನೇಕ ವಿಮಾ ಕಂಪನಿಗಳಲ್ಲಿ ವಿಮೆ ಮಾಡಿಸಿದ್ದಾರೆ. ನಂತರ ಆಕೆಯನ್ನು ಯೋಜನೆ ರೂಪಿಸಿ, ಕೊಲೆ ಮಾಡಿದ್ದಾರೆ. ಆದರೆ ನಂತರ ಆ ಕೋಲೆಯನ್ನು ಅಪಘಾತವಾಗಿ ಬಿಂಬಿಸಿ, ತನ್ನ ಯೋಜನೆಯನ್ನು ಯಶಸ್ವಿ ಯಾಗಿ ಕಾರ್ಯಗತಗೊಳಿಸಿದ್ದಾನೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಘಟನೆಯ ದಿನ ಒಂಗೋಲ್ ಆಸ್ಪತ್ರೆಗೆ ಭೇಟಿ ನೀಡುವ ನೆಪದಲ್ಲಿ ಕುಮಾರ್ ತನ್ನ ಸಹೋದರಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದಿದ್ದ. ಆದರೆ ವಾಪಸು ಬರುವಾಗ ಆಕೆಗೆ ನಿದ್ರೆ ಮಾತ್ರೆ ಕುಡಿಸಿ ಸಾಯಿಸಿದ್ದಾನೆ. ನಂತರ ಆ್ಯಕ್ಸಿಡೆಂಟ್ ಆಗಿ ಕೊಲೆ ಮಾಡಲು ಯತ್ನಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.