Wednesday, February 19, 2025
HomeಬೆಂಗಳೂರುBSH Home Appliances ಬೆಂಗಳೂರಿನಲ್ಲಿ ಹೊಸ ಪ್ರೀಮಿಯಂ Bosch ಬ್ರಾಂಡ್ ಮಳಿಗೆಯ ಮೂಲಕ ರೀಟೇಲ್ ಅನುಭವದ...

BSH Home Appliances ಬೆಂಗಳೂರಿನಲ್ಲಿ ಹೊಸ ಪ್ರೀಮಿಯಂ Bosch ಬ್ರಾಂಡ್ ಮಳಿಗೆಯ ಮೂಲಕ ರೀಟೇಲ್ ಅನುಭವದ ಮರು ವ್ಯಾಖ್ಯಾನ


ಬೆಂಗಳೂರಿನ ಅಫ್ಲುಯೆಂಟ್ ನೈಬರ್ ಹುಡ್ಸ್ ಪ್ರೀಮಿಯಂ Bosch ಸಾಧನಗಳಿಗೆ ಬೇಡಿಕೆ ಹೆಚ್ಚಿಸುತ್ತಿವೆ

ರಾಷ್ಟ್ರೀಯ: ಗೃಹ ಸಾಧನಗಳಲ್ಲಿ ಜಾಗತಿಕ ಮುಂಚೂಣಿಯ BSH Hausgeräte GmbH ಅಧೀನ ಸಂಸ್ಥೆ BSH Home Appliances Pvt. Ltd. ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ಹೊಚ್ಚಹೊಸ ಮತ್ತು ಅತ್ಯಂತ ಪ್ರೀಮಿಯಂ Bosch ಬ್ರಾಂಡ್ ಮಳಿಗೆಯ ಅದ್ಧೂರಿ ಪ್ರಾರಂಭವನ್ನು ಹೆಮ್ಮೆಯಿಂದ ಪ್ರಕಟಿಸಿದೆ. ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಈ ಅತ್ಯಾಧುನಿಕ ಮಳಿಗೆಯು ಭಾರತಕ್ಕೆ ರೀಟೇಲ್ ಶ್ರೇಷ್ಠತೆಯ ಜಾಗತಿಕ ಮಾನದಂಡಗಳನ್ನು ತರುವ ನಿಟ್ಟಿನಲ್ಲಿ BSH ಉದ್ದೇಶದಲ್ಲಿ ಗಮನಾರ್ಹ ಮೈಲಿಗಲ್ಲಾಗಿದೆ. ಈ ಪ್ರಾರಂಭೋತ್ಸವದಲ್ಲಿ BSH Home Appliances Pvt. Ltd ಎಂ.ಡಿ. ಮತ್ತು ಸಿಇಒ ಸೈಫ್ ಖಾನ್ ಮತ್ತು ಅವರೊಂದಿಗೆ ಗೌರವಾನ್ವಿತ ಡೀಲರ್ ಪಾಲುದಾರರಾದ ಎಂ. ಉತ್ತಮ್ ಚಂದ್ ಮತ್ತು ಯು.ರಚನಾ ಭಾಗವಹಿಸಿದ್ದರು.
1300 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ Bosch ಬ್ರಾಂಡ್ ಮಳಿಗೆಯು ಆಕರ್ಷಕ ಅನುಭವವನ್ನು ನೀಡುತ್ತಿದ್ದು 90+ Boschನ ಅತ್ಯಾಧುನಿಕ ಸಾಧನಗಳು ಪ್ರದರ್ಶನದಲ್ಲಿವೆ. ಈ ಮಳಿಗೆಯು ವೈವಿಧ್ಯಮಯ ಶ್ರೇಣಿಯ ಉತ್ಪನ್ನಗಳನ್ನು ಹೊಂದಿದ್ದು ಅದರಲ್ಲಿ ಹೊಸದಾಗಿ ಬಿಡುಗಡೆಯಾದ 9ಕೆಜಿ ಮತ್ತು 10ಕೆಜಿ ವಾಷಿಂಗ್ ಮೆಷಿನ್ ಗಳು, ತಾಂತ್ರಿಕವಾಗಿ ಸುಧಾರಿಸಿದ ಡಿಶ್ ವಾಷರ್ ಗಳು, ರೆಫ್ರಿಜಿರೇಟರ್ ಗಳು, ವ್ಯಾಕ್ಯೂಮ್ ಕ್ಲೀನರ್ ಗಳು, ವಿಸ್ತಾರ ಶ್ರೇಣಿಯ ಓವನ್ ಗಳು ಮತ್ತು ಕಾಫಿ ಮೆಷಿನ್ ಗಳಿವೆ. ವಿಶೇಷವಾದ ಅಂಶವೆಂದರೆ ಅತ್ಯತ ದೊಡ್ಡ ಬಿಲ್ಟ್-ಇನ್ ರೇಂಜ್ ಡಿಸ್ಪ್ಲೇ, ಇದು Bosch ಹೊಸ ಬಿಲ್ಟ್-ಇನ್ ರೆಫ್ರಿಜರೇಟರ್ ಗಳನ್ನು ಹೊಂದಿದೆ ಮತ್ತು ಡಿಶ್ ವಾಷರ್ ಗಳ ಸಮಗ್ರ ಆಯ್ಕೆಯನ್ನು ತೋರಿಸುವ ಮೂಲಕ ಬಿಲ್ಟ್-ಇನ್ ಸಾಧನಗಳು ಮತ್ತು ಪ್ರೀಮಿಯಂ ಕಿಚನ್ ಪರಿಹಾರಗಳಿಗೆ ಬೆಂಗಳೂರಿನಲ್ಲಿ ಬೇಡಿಕೆ ಹೆಚ್ಚಾಗಿರುವುದನ್ನು ತೋರುತ್ತದೆ.
ಭಾರತದ ಸಿಲಿಕಾನ್ ವ್ಯಾಲಿಯಾಗಿ ಬೆಂಗಳೂರು ಮುಂಚೂಣಿಯ ಗೃಹ ಸಾಧನಗಳಿಗೆ ಪ್ರಮುಖ ಮಾರುಕಟ್ಟೆಯಾಗಿದ್ದು ಅದಕ್ಕೆ ಅದರ ತಂತ್ರಜ್ಞಾನ ಪ್ರಿಯ ಮತ್ತು ಶ್ರೀಮಂತ ಜನಸಂಖ್ಯೆಯಿಂದ ಮುಖ್ಯ ಕಾರಣ. ನಗರದ ಜನರ ಆದಾಯ ಹೆಚ್ಚುತ್ತಿರುವುದು ಮತ್ತು ಐಷಾರಾಮಿ ರಿಯಲ್ ಎಸ್ಟೇಟ್ ಅಭಿವೃದ್ಧಿಗಳು ಉನ್ನತ ಗುಣಮಟ್ಟದ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸಿವೆ. ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಗಳು, ಡಿಶ್ ವಾಷರ್ ಗಳು ಮತ್ತು ಅಡುಗೆ ಸಾಧನಗಳು BSH ಪ್ರಗತಿಯ ಮುಂಚೂಣಿಯಲ್ಲಿದ್ದು ಸ್ಮಾರ್ಟ್, ಸಂಪರ್ಕಿತ ಮತ್ತು ಸುಸ್ಥಿರ ಗೃಹ ಪರಿಹಾರಗಳ ಕುರಿತು ಬೆಂಗಳೂರಿನ ಬದಲಾವಣೆಯನ್ನು ಬಿಂಬಿಸುತ್ತದೆ. ಗ್ರಾಹಕರು ಸರಿಸಾಟಿ ಇರದ ಅನುಕೂಲ, ದಕ್ಷತೆ ಮತ್ತು ಪರಿಸರ ಸ್ನೇಹಿಯ ಆವಿಷ್ಕಾರಗಳನ್ನು ನಿರೀಕ್ಷಿಸುತ್ತಿದ್ದಾರೆ.
ಹೊಸ ಬಾಷ್ ಬ್ರಾಂಡ್ ಮಳಿಗೆಯು ತಲ್ಲೀನಗೊಳಿಸುವ ಶಾಪಿಂಗ್ ಅನುಭವ ನೀಡುತ್ತಿದ್ದು ಅದು ಬೆಂಗಳೂರಿನ ವಿಕಾಸಗೊಳ್ಳುತ್ತಿರುವ ಆದ್ಯತೆಗಳಿಗೆ ಪೂರಕವಾಗಿದೆ.
BSH Home Appliances India ಎಂ.ಡಿ. ಮತ್ತು ಸಿಇಒ ಸೈಫ್ ಖಾನ್ ಬೆಂಗಳೂರಿನಲ್ಲಿನ ವಿಸ್ತರಣೆ ಕುರಿತು ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದು, “ಬೆಂಗಳೂರು ನಮಗೆ ಪ್ರಮುಖ ಮಾರುಕಟ್ಟೆಯಾಗಿದ್ದು, ಗಮನಾರ್ಹ ಪ್ರಗತಿಯನ್ನು ಉತ್ತೇಜಿಸುತ್ತಿದೆ ಮತ್ತು ಆಧುನಿಕ ಆಕಾಂಕ್ಷೆಯ ಭಾರತೀಯ ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಗಳನ್ನು ಮೈವೆತ್ತಿದೆ. ನಮ್ಮ ಪ್ರೀಮಿಯಂ ಉತ್ಪನ್ನದ ಕೊಡುಗೆಗಳು ಸತತವಾಗಿ ನಮ್ಮ ಗ್ರಾಹಕರ ಮೆಚ್ಚುಗೆ ಪಡೆದಿವೆ ಮತ್ತು ಈ ಹೊಸ ಮಳಿಗೆ ಪ್ರಾರಂಭವು ಪ್ರೀಮಿಯಂ ಸಾಧನದ ವಲಯದಲ್ಲಿ ನಮ್ಮ BSH ನ ನಾಯಕತ್ವವನ್ನು ಮರು ದೃಢೀಕರಿಸುತ್ತದೆ. ಜರ್ಮನ್ ಎಂಜಿನಿಯರಿಂಗ್ ಮತ್ತು ಉನ್ನತ ಗುಣಮಟ್ಟಕ್ಕೆ ಪರ್ಯಾಯ ಹೆಸರಾದ ಬ್ರಾಂಡ್ ಆಗಿ ನಾವು ಪ್ರತಿ ಟಚ್ ಪಾಯಿಂಟ್ ನಲ್ಲೂ ಸರಿಸಾಟಿ ಇರದ ಶಾಪಿಂಗ್ ಅನುಭವ ನೀಡಲು ಬದ್ಧರಾಗಿದ್ದೇವೆ. ಬೆಂಗಳೂರಿನ ಈ ಹೊಸ Bosch ಬ್ರಾಂಡ್ ಮಳಿಗೆಯು ಬರೀ ರೀಟೇಲ್ ತಾಣವಲ್ಲಿ, ಅದು ಭಾರತದಲ್ಲಿ ರೀಟೇಲ್ ಅನುಭವದಲ್ಲಿ ಜಾಗತಿಕ ಮಾನದಂಡಗಳನ್ನು ತರುವ ನಮ್ಮ ಪ್ರಯತ್ನವಾಗದ್ದು ಅಲ್ಲಿ ನಮ್ಮ ಗ್ರಾಹಕರು Bosch ವ್ಯಾಖ್ಯಾನಿಸುವ ಆವಿಷ್ಕಾರಕ, ಉನ್ನತ ಕಾರ್ಯಕ್ಷಮತೆಯ ಪರಿಹಾರಗಳನ್ನು ಪಡೆಯಬಹುದು” ಎಂದರು.
ಈ ಉಪಕ್ರಮದ ಕೇಂದ್ರದಲ್ಲಿ ಭಾರತದಲ್ಲಿ ಪ್ರೀಮಿಯಂ ಗ್ರಾಹಕ ಅನುಭವ ಮರು ವ್ಯಾಖ್ಯಾನಿಸುವ BSHನ ಧ್ಯೇಯವಿದೆ. ಈ ರೀಟೇಲ್ ಎಕ್ಸೆಲೆನ್ಸ್ ಉಪಕ್ರಮವು ಪ್ರೀಮಿಯಂ ಸಾಧನಗಳ ಮಾರುಕಟ್ಟೆಯಲ್ಲಿ ಹೊಸ ಮಾನದಂಡ ನಿಗದಿಪಡಿಸಿದ್ದು ವೈಯಕ್ತಿಕಗೊಳಿಸಿದ ಉತ್ಪನ್ನದ ಪ್ರಾತ್ಯಕ್ಷಿಕೆಗಳು, ಪರಿಣಿತರ ಸಲಹೆ ಮತ್ತು Bosch ಪರಿಪೂರ್ಣ ಆತಿಥೇಯನಾಗಿ Bosch ತತ್ವಗಳನ್ನು ಒಳಗೊಂಡ ತಲ್ಲೀನಗೊಳಿಸುವ ಪರಿಸರ ನೀಡುತ್ತದೆ. ಗ್ರಾಹಕರ ಸಂವಹನ ಹೆಚ್ಚಿಸಲು ಮತ್ತು ಉನ್ನತ ಗುಣಮಟ್ಟದ ಮಾರಾಟ ಹಾಗೂ ಮಾರಾಟ ನಂತರದ ಬೆಂಬಲ ನೀಡುವ ಈ ಮಳಿಗೆಯು ಪ್ರತಿ ಟಚ್ ಪಾಯಿಂಟ್ ನಲ್ಲೂ ಗ್ರಾಹಕರಿಗೆ ಸ್ಫೂರ್ತಿ ಮತ್ತು ಸಂತೃಪ್ತಿ ತರುವ ಗುರಿ ಹೊಂದಿದೆ. ಈ ಕಾರ್ಯಕ್ರಮದ ಮೂಲಕ BSH ಭಾರತದಲ್ಲಿ ರೀಟೇಲ್ ಅನುಭವಕ್ಕೆ ಜಾಗತಿಕ ಮಾನದಂಡಗಳನ್ನು ತರುವ ಗುರಿ ಹೊಂದಿದೆ.
ಕರ್ನಾಟಕಕ್ಕೆ ರಾಜ್ಯದಲ್ಲಿ ಸದೃಢ ವಿತರಣೆಯ ಜಾಲವಿದ್ದು ಒಟ್ಟು 1013 ಟಚ್ ಪಾಯಿಂಟ್ ಗಳಿದ್ದು ಅದರಲ್ಲಿ 18 ಎಕ್ಸ್ ಕ್ಲೂಸಿವ್ ಬ್ರಾಂಡ್ ಮಳಿಗೆಗಳು, 325 ನೇರ ಕೌಂಟರ್ ಗಳು ಮತ್ತು 570 ವಿತರಕರ ಕೌಂಟರ್ ಗಳಿವೆ.
BSH ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವಾ ಬೆಂಬಲ ಒದಗಿಸಲು ಬದ್ಧವಾಗಿದೆ. ದೇಶವ್ಯಾಪಿ 16 ಶಾಖಾ ಸೇವಾ ಕಛೇರಿಗಳಿಂದ 350ಕ್ಕೂ ಹೆಚ್ಚು ಅಧಿಕೃತ ಸೇವಾ ಪಾಲುದಾರರು ಮತ್ತು 1500 ತರಬೇತಿ ಹೊಂದಿದ ಸೇವಾ ತಂತ್ರಜ್ಞರನ್ನು ಹೊಂದಿದ್ದು BSH ಪ್ರತಿ ಗ್ರಾಹಕರೂ ಸರಿಸಾಟಿ ಇರದ ಬೆಂಬಲ ಮತ್ತು ನೆರವು ಪಡೆಯುವುದನ್ನು ದೃಢೀಕರಿಸುತ್ತದೆ.
ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ: https://www.bosch-home.in/

RELATED ARTICLES
- Advertisment -
Google search engine

Most Popular