ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ತಮ್ಮ ರಿಚಾರ್ಜ್ ಪ್ಲಾನ್‌ಗಳ ಬೆಲೆ ಹೆಚ್ಚಾದ ಬೆನ್ನಲ್ಲೇ ಎಲ್ಲರ ಕಣ್ಣು ಬಿಎಸ್‌ಎನ್‌ಎಲ್ 5ಜಿ ಮೇಲಿದೆ. ಇನ್ಮುಂದೆ ಬಿಎಸ್‌ಎನ್‌ಎಲ್ ಸೇವೆಯಲ್ಲೂ ವೇಗದ ಇಂಟರ್ನೆಟ್ ಪಡೆಯಲಿದ್ದೀರಿ. ಈ ನೆಟ್‌ವರ್ಕ್‌ನಿಂದ ಮೊದಲ ಕರೆ ಮಾಡಲಾಗಿದೆ, ಈ ಕರೆಯನ್ನು ಸ್ವತಃ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾಡಿದ್ದಾರೆ.
ಈ ಬಗ್ಗೆ ಸಿಂಧಿಯಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಚಿವರು ಕಾಲ್ ಮಾಡುತ್ತಿರುವುದು ಕಂಡುಬಂದಿದೆ. ಇಂದು BSNL 5G ಸಕ್ರಿಯಗೊಳಿಸಿದ ಫೋನ್‌ನಲ್ಲಿ ವೀಡಿಯೊ ಕರೆಯನ್ನು ಪ್ರಯತ್ನಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
BSNLನ ರೀಚಾರ್ಜ್ ಯೋಜನೆಗಳು ಈಗಾಗಲೇ ಸಾಕಷ್ಟು ಕಮ್ಮಿ ದರದಲ್ಲಿವೆ. ಅದೇ ರೀತಿ 5G ಸೇವೆಯನ್ನೂ BSNL ಕಡಿಮೆ ದರದಲ್ಲಿ ನೀಡಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. Jio, Airtel ಮತ್ತು Vodafone ರೀಚಾರ್ಜ್ ದರ ಹೆಚ್ಚಿಸಿದ ನಂತರ ಬಳಕೆದಾರರು ದೊಡ್ಡ ಪ್ರಯೋಜನ ಪಡೆಯಲಿದ್ದಾರೆ.
ವೀಡಿಯೋ ಕರೆ ಮಾಡಿದ ಸಚಿವ ಸಿಂಧಿಯಾ ಟೆಲಿಕಾಂ ಅಧಿಕಾರಿಗಳೊಂದಿಗೆ ಮತನಾಡಿದ್ದಾರೆ. 5G ನೆಟ್‌ವರ್ಕ್ ಆಗಮನದಲ್ಲಿ ಸ್ವಲ್ಪ ವಿಳಂಬವಾಗಿದೆ. ಆದರೆ ಅದನ್ನು ಶೀಘ್ರದಲ್ಲೇ ಜನರಿಗೆ ನೀಡಲಾಗುವುದು. ಎಲ್ಲರ ಕೈಯಲ್ಲೂ BSNL 5G ಸಿಗುವ ದಿನ ದೂರವಿಲ್ಲ ಎಂದು ಅವರು ಹೇಳಿದ್ದಾರೆ.