Tuesday, December 3, 2024
Homeರಾಷ್ಟ್ರೀಯಗ್ರಾಹಕರಿಗೆ ಗುಡ್‌ ನ್ಯೂಸ್‌ ಕೊಟ್ಟ ಬಿಎಸ್‌ಎನ್‌ಎಲ್: ಜಿಯೋ, ಏರ್‌ಟೆಲ್ ಗೆ ಶಾಕ್..!

ಗ್ರಾಹಕರಿಗೆ ಗುಡ್‌ ನ್ಯೂಸ್‌ ಕೊಟ್ಟ ಬಿಎಸ್‌ಎನ್‌ಎಲ್: ಜಿಯೋ, ಏರ್‌ಟೆಲ್ ಗೆ ಶಾಕ್..!


ನವದೆಹಲಿ: ಭಾರತದಲ್ಲಿ ಟೆಲಿಕಾಂ ಅಂಗಳದಲ್ಲಿ ದೈತ್ಯವಾಗಿ ಬೆಳೆದಿರುವ ಖಾಸಗಿ ಕಂಪನಿಗಳಾದ ರಿಲಯನ್ಸ್ ಜಯೋ, ಎರ್‌ಟೈಲ್ ಮತ್ತು ವೊಡಾಫೋನ್-ಐಡಿಯಾಗೆ ಸರ್ಕಾರಿ ಸಂಸ್ಥೆ ಬಿಎಸ್‌ಎನ್‌ಎಲ್ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ. ಪ್ರಮುಖ ಮೂರು ಖಾಸಗಿ ಕಂಪನಿಗಳು ಬೆಲೆ ಹೆಚ್ಚಳ ಮಾಡಿಕೊಂಡ ನಂತರ ಗ್ರಾಹಕರು ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡುತ್ತಿದ್ದಾರೆ.
ಅಕ್ಟೋಬರ್ 22ರಂದು ಹೊಸ ಲೋಗೋ ಅನಾವರಣಗೊಳಿಸಿದ ಬಳಿಕ ಸದ್ಯಕ್ಕೆ ಬೆಲೆ ಏರಿಕೆಯ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಎಂಬ ಮಾಹಿತಿಯನ್ನು ಬಿಎಸ್‌ಎನ್‌ಎಲ್ ಅಧಿಕೃತವಾಗಿ ಹೇಳಿಕೆ ನೀಡಿತ್ತು. ಇದರ ಜೊತೆಯಲ್ಲಿ ಗ್ರಾಹಕರಿಗಾಗಿ ಹೊಸ ಏಳು ಸೇವೆಗಳನ್ನು ಪರಿಚಯಿಸಿತ್ತು. ಈ ಮೂಲಕ ತನ್ನ ನೆಟ್‌ವರ್ಕ್ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಬಿಎಸ್‌ ಎನ್‌ಎಲ್ ಮುಂದಾಗಿದೆ.

ಕೇಂದ್ರ ಸಂವಹನ ಇಲಾಖೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಏಳು ಸೇವೆಗಳ ಘೋಷಣೆ ಮಾಡಿದ್ದಾರೆ. 2025ರ ವೇಳೆಗೆ ಬಿಎಸ್‌ಎನ್‌ಎಲ್‌ 5G ಸೇವೆಗಳನ್ನು ನೀಡಲು ಆರಂಭಿಸಲಿದೆ ಎಂಬ ಮಹತ್ವದ ಮಾಹಿತಿಯನ್ನು ಸಹ ನೀಡಿದ್ದಾರೆ. BSNL ತನ್ನ 5G ನೆಟ್‌ವರ್ಕ್‌ನ ಪರೀಕ್ಷೆಯನ್ನು 3.6 GHz ಮತ್ತು 700 MHz ಬ್ಯಾಂಡ್‌ಗಳಲ್ಲಿ ಪೂರ್ಣಗೊಳಿಸಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ದೇಶದ ಎಲ್ಲಾ ಭಾಗದಲ್ಲಿ ಶೀಘ್ರದಲ್ಲಿಯೇ 5G ಸೇವೆಯನ್ನು ಆರಂಭಿಸುವ ಗುರಿಯನ್ನು ಬಿಎಸ್‌ಎನ್‌ಎಲ್ ಹೊಂದಿದೆ. ಮತ್ತೊಂದೆಡೆ 4G ಅಳವಡಿಕೆ ಕಾರ್ಯದ ವೇಗವನ್ನು ಸಹ ಹೆಚ್ಚಿಸಲಾಗದೆ. ಈ ಬಳಕೆದಾರರಿಗೆ ಸೂಪರ್‌ಫಾಸ್ಟ್ ಇಂಟರ್‌ನೆಟ್ ನೀಡಲು ಬಿಎಸ್‌ಎನ್‌ಎಲ್ ಪ್ರಯತ್ನಿಸುತ್ತಿದೆ. ಯಾವುದೇ ಇಂಟರ್‌ನೆಟ್ ಅಡಚಣೆ ಇಲ್ಲದೇ ಬಳಕೆದಾರರು ವಿಡಿಯೋ ವೀಕ್ಷಣೆ ಮಾಡಬೇಕು ಮತ್ತು ನೆಟ್‌ವರ್ಕ್ ಸಮಸ್ಯೆಯನ್ನು ದೂರ ಮಾಡುವ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್ ಕಾರ್ಯ ನಿರ್ವಹಿಸುತ್ತಿದೆ.
ಬಿಎಸ್‌ಎನ್‌ಎಲ್‌ ನೀಡಿರುವ ಹೊಸ ಏಳು ಸೇವೆಗಳು
1.Spam-Free Network: ಈ ಸೇವೆ ಸ್ಪ್ಯಾಮ್ ಮೆಸೇಜ್‌ಗಳನ್ನು ನಿಲ್ಲಿಸಲು ಸಹಾಯ ಮಾಡುತ್ತದೆ.
2.ational Wi-Fi Roaming: ಇದೀಗ ಬಿಎಸ್‌ಎನ್‌ಎಲ್ ಫೈಬರ್ ಕನೆಕ್ಷನ್ ಜೊತೆಯಲ್ಲಿ ದೇಶದಾದ್ಯಂತ BSNL Wi-Fi ಹಾಟ್‌ಸ್ಪಾಟ್ ಮೂಲಕ ಫ್ರೀ ಇಂಟರ್‌ನೆಟ್ ಬಳಕೆಯ ಅವಕಾಶವನ್ನು ಕಲ್ಪಿಸಲಿದೆ.
3.BSNL IFTV: ಈ ಸೇವೆ ಮೂಲಕ ಮನೆಯಲ್ಲಿಯೇ ಕುಳಿತು 500ಕ್ಕೂ ಅಧಿಕ ಚಾನೆಲ್‌ಗಳನ್ನು ಲೈವ್ ವೀಕ್ಷಣೆ ಮಾಡಬಹುದು.
4.SIM Kiosk: ಈ ಸೇವೆಯಿಂದ ಗ್ರಾಹಕರು ಎಲ್ಲಿ ಬೇಕಾದರೂ ಸರಳವಾಗಿ ಬಿಎಸ್‌ಎನ್‌ಎಲ್ ಸಿಮ್ ಖರೀದಿ ಮಾಡಬಹುದಾಗಿದೆ.
5.Direct-to-Device Connectivity: ಇದು ಗ್ರಾಹಕರಿಗೆ ಆಪತ್ಕಾಲದಲ್ಲಿ ಸಹಾಯ ಮಾಡುವ ಸೇವೆಯನ್ನು ಕಲ್ಪಿಸುತ್ತದೆ.
6.Disaster Relief Network: ತುರ್ತು ಪರಿಸ್ಥಿತಿಗಳಲ್ಲಿಯೂ ಸುರಕ್ಷಿತ ನೆಟ್‌ವರ್ಕ್ ಒದಗಿಸುವುದು. ಡ್ರೋನ್‌ಗಳು ಮತ್ತು ಬಲೂನ್-ಆಧಾರಿತ ಸಿಸ್ಟಮ್‌ ಬಳಸಿ ನೆಟ್‌ವರ್ಕ್ ಕವರೇಜ್ ಹೆಚ್ಚಳ ಮಾಡೋದು.
7.Private 5G Mining Operations: ಗಣಿಗಾರಿಕೆ ಕ್ಷೇತ್ರಗಳಲ್ಲಯೂ 5G ಸೇವೆಯನ್ನು ಬಿಎಸ್‌ಎನ್‌ಎಲ್ ಪರಿಚಯಿಸಲಾಗಿದೆ.

ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ಹೊಸ ಮತ್ತು ಉತ್ತಮ ಸೇವೆಗಳನ್ನು ಪ್ರಾರಂಭಿಸಲು ಬಿಎಸ್‌ಎನ್‌ಎಲ್ ಪ್ಲಾನ್ ಮಾಡಿಕೊಂಡಿದೆ. 5G ಸೇವೆ ಆರಂಭದ ಬಳಿಕ BSNL ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನು ತರಲು ಸಿದ್ಧವಾಗಿದೆ. ಬಿಎಸ್‌ಎನ್‌ಎನ್‌ ಈ ಹೊಸ ಪ್ಲಾನ್‌ಗಳು ಖಾಸಗಿ ಟೆಲಿಕಾಂ ಕಂಪನಿಗಳಿಗೆ ದೊಡ್ಡ ಸವಾಲು ಆಗಿ ಎದುರಾಗಲಿದೆ.
https://x.com/BSNLCorporate/status/1848659581834072163?ref_src=twsrc%5Etfw%7Ctwcamp%5Etweetembed%7Ctwterm%5E1848659581834072163%7Ctwgr%5Ea08e9d9764a6034319fa208f8dfc96be38b848cb%7Ctwcon%5Es1_c10&ref_url=https%3A%2F%2Fapi-news.dailyhunt.in%2F

RELATED ARTICLES
- Advertisment -
Google search engine

Most Popular