ಬೆಳ್ಮಣ್ : ಶಿಕ್ಷಣವು ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರವನ್ನು, ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರೇರಣೆ ನೀಡಬೇಕು. ಸಂಸ್ಕಾರಯುತ ಶಿಕ್ಷಣದ ಮೂಲಕ ಶಾಲೆಗಳು ಶ್ರೇಷ್ಠ ನಾಗರಿಕ ಸಮಾಜವನ್ನು ರೂಪಿಸಲು ಶ್ರಮಿಸಬೇಕೆಂದು ಮಾಜಿ ಸಚಿವರು, ಕಾರ್ಕಳ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ಹೇಳಿದರು. ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಸಚ್ಚೇರಿಪೇಟೆ ಇದರ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಿ.ಎಂ.ಜೆ.ಎಫ್ ಲಯನ್ ಹರಿಪ್ರಸಾದ್ ರೈ ಇವರು ಪ್ರಧಾನ ಅತಿಥಿಗಳಾಗಿ ಮಾತನಾಡಿ ಲಯನ್ ಶಾಲೆಯು ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಸಮಗ್ರ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಿರುವುದೆಂದು ತಿಳಿಸಿ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು
ಶ್ಲಾಘಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಬಿ ಜಿನ್ನಪ್ಪ ಪೂಜಾರಿ, ಬಿ ಇ ಓ ಕಚೇರಿ ಕಾರ್ಕಳ ಅಧೀಕ್ಷಕ
ರವಿ ಬಿ ಇ ಇವರನ್ನು ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲಾ ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಲಯನ್ ವಿಕ್ಟರ್ ಸಿಕ್ವೇರಾ, ಲಯನ್ ಭಾಸ್ಕರ್ ಶೆಟ್ಟಿ, ನಿವೃತ್ತ ಅಧ್ಯಾಪಕ ವೆಂಕಟೇಶ್ ಪೈ ಇವರು ವೈಯಕ್ತಿಕ ನೆಲೆಯಲ್ಲಿ ಕೊಡಮಾಡಿದ ನಗದು ಪುರಸ್ಕಾರಗಳನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಮುಖ್ಯೋಪಾಧ್ಯಾಯರಾದ ಗೌರವ್ ಆರ್ ಕೆ ವರದಿ ವಾಚಿಸಿದರು.
ಮುಂಡ್ಕೂರು – ಕಡಂದಲೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಪ್ರಶಾಂತ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಎಂಜೆಎಫ್ ಲಯನ್. ಡಾ. ಎ. ರಾಜಾರಾಮ್ ರೈ, ಕೆ.ಪಿ ಸುಚರಿತ ಶೆಟ್ಟಿ, ಸಂಚಾಲಕರಾದ ಲಯನ್ ಕೆ ಸತ್ಯಶಂಕರ್ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಅಭಿಜಿತ್ ಶೆಣೈ, ವಿದ್ಯಾರ್ಥಿ ನಾಯಕಿ ತೃಪ್ತಿ ಪಿ ಪೂಜಾರಿ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಲಯನ್ ಸದಸ್ಯರು,ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಜಯಲಕ್ಷ್ಮಿ ನಾಯಕ್, ಶಿಕ್ಷಕಿ ಸುಶೀಲಾ ಸನ್ಮಾನ ಪತ್ರ ವಾಚಿಸಿದರು. ಎಂಜೆಎಫ್ ಲ। ಡಾ. ಎ. ರಾಜಾರಾಮ್ ರೈ ಸ್ವಾಗತಿಸಿದರು. ಶಿಕ್ಷಕಿ ಶರ್ಮಿಳ ವಂದಿಸಿದರು. ಶಿಕ್ಷಕಿಯರಾದ ಪ್ರತಿಮಾ, ಜಯಲಕ್ಷ್ಮೀ ಶೆಟ್ಟಿಗಾರ್, ಜ್ಯೋತಿ ಎಸ್, ರಮ್ಯಾ ಕಾಮತ್, ಶೈಲಾ ಕಿರಣ್, ದೈಹಿಕ ಶಿಕ್ಷಕ ನಿತೇಶ್ ಬಹುಮಾನಿತರ ಪಟ್ಟಿ ವಾಚಿಸಿದರು. ಮಂಜುವಾಣಿ ವೈ ಶೆಟ್ಟಿ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.