Sunday, July 21, 2024
Homeಮಂಗಳೂರುವೈದ್ಯಕೀಯ ಶಿಬಿರಗಳಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ: ಗೀತಾದೇವಿ ಚೂಂತಾರು

ವೈದ್ಯಕೀಯ ಶಿಬಿರಗಳಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ: ಗೀತಾದೇವಿ ಚೂಂತಾರು

ಮಂಗಳೂರು ಹವ್ಯಕ ಸಭಾ, ಚೂoತಾರು ಸರೋಜಿನಿ ಭಟ್ ಪ್ರತಿಷ್ಟಾನ, ಶ್ರೀ ಭಾರತೀ ಕಾಲೇಜು, ಶ್ರದ್ಧಾಂನಂದ ಸರಸ್ವತಿ ವಿದ್ಯಾಲಯ ಹಾಗೂ ಇನ್ನಿತರ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ 03.03.2024 ರಂದು ಶ್ರೀ ಭಾರತೀ ಕಾಲೇಜು ಆವರಣದಲ್ಲಿ ಉಚಿತ ವೈದ್ಯಕೀಯ ಶಿಬಿರ (ತಪಾಸಣೆ, ಸಲಹೆ ಮತ್ತು ಚಿಕಿತ್ಸೆ )ಏರ್ಪಡಿಸಲಾಯಿತು. ಡಾ. ರಾಜೇಂದ್ರ ಪ್ರಸಾದ್ ಹಾಗೂ ಡಾ. ಮುರಳೀ ಮೋಹನ್ ಚೂoತಾರು ಇದರ ನೇತೃತ್ವವನ್ನು ವಹಿಸಿದರು. ಮಂಗಳೂರು ಹವ್ಯಕ ಸಭಾ ಅಧ್ಯಕ್ಷೆ ಗೀತಾ ದೇವಿ ಚೂoತಾರು ಅವರು ದೀಪ ಬೆಳಗಿಸಿ ಈ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು. ಈ ಶಿಬಿರದಲ್ಲಿ ನಮ್ಮ ಸಮಾಜದ ಹೆಸರಾಂತ ವೈದ್ಯರುಗಳು ಪಾಲ್ಗೊಂಡು ಸಾರ್ವಜನಿಕರಿಗೆ ತಮ್ಮ ಪ್ರೀತಿ ಪೂರ್ವಕ ಸೇವೆಯನ್ನು ಸಲ್ಲಿಸಿದರು. ಅದರಲ್ಲಿ ಪ್ರೊ. ನರಸಿಂಹ ಹೆಗ್ಡೆ( MD ಫಿಸಿಷನ್ ). ಡಾ. ಜಿ . ಕೆ ಭಟ್ ಸಂಕಬಿತ್ಲು , ಡಾ ಸುರೇಶ್ ನೆಗಳಗುಳಿ( ಎಂ ಡಿ ಆಯುರ್ವೇದಿಕ್), ಪ್ರೊ. M. S ಹರಿಶ್ಚಂದ್ರ (M. S. ಸರ್ಜನ್ ), Dr. ಮುರಳಿ ಕೇಶವ ( MD Pediatrics), Dr.ಕೇಶವ (M. D ಆಯುರ್ವೇದ, ವೇದo ಆಯು ), ಯೋಗರತ್ನ ಡಾ ಗೋಪಾಲಕೃಷ್ಣ ದೇಲoಪಾಡಿ, Dr.ಸಾಧನಾ ಅಡಪತ್ಯ,(M S, OBG), Dr ವಿಕ್ರಂ GK ಭಟ್ (M S ORTHO) Dr. ಅಂಕಿತಾ (MS, ENT) ಪ್ರಮುಖರು. ಸಾರ್ವಜನಿಕ ಕ್ಷೇತ್ರದಲ್ಲಿ ನಮ್ಮ ಸಮಾಜದ ಕೊಡುಗೆ ಶ್ಲಾಘನೀಯ. ಸುಮಾರು 100ಕ್ಕೂ ಮಿಕ್ಕಿ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಂಡರು. ನಿಟ್ಟೆ ಕಾಲೇಜ್ ಆಫ್ ಸ್ಪೀಚ್ ಆಂಡ್ ಹಿಯರಿಂಗ್, ಮಂಗಳೂರು ನರ್ಸಿಂಗ್ ಹೋಂ, ಭಟ್ಸ್ ನರ್ಸಿಂಗ್ ಹೋಮ್, ಮಂಗಳಾ ನರ್ಸಿಂಗ್ ಹೋಂ, ವೇದo ಆಯು ಆಯುರ್ವೇದಿಕ್ ಹಾಸ್ಪಿಟಲ್, ಕಣಚೂರು ಆಯುರ್ವೇದ ಕಾಲೇಜು, ಸ್ಪರ್ಶ ಡಯಗ್ನಿಸ್ಟಿಟ್ ಸೆಂಟರ್, ಎ. ಜೆ ಹಾಸ್ಪಿಟಲ್ ಆಫ್ ಡೆಂಟಲ್ ಸೈನ್ಸಸ್, ವೆನ್ಲಾಕ್ ಹಾಸ್ಪಿಟಲ್ ಮುಂತಾದ ವೈದ್ಯಕೀಯ ಸಂಸ್ಥೆಗಳು ತಮ್ಮ ಸೇವೆಯನ್ನು ಸಲ್ಲಿಸಿ ಈ ಸತ್ಕಾರ್ಯದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದರು. “ರಕ್ತದಾನ ಮಹಾದಾನ”ಎಂಬ ಆಶಯದಡಿ ಸುಮಾರು 20 ಜನ ರಕ್ತದಾನಿಗಳು ಮುಂದೆ ಬಂದು ರಕ್ತದಾನ ಮಾಡಿದರು.

RELATED ARTICLES
- Advertisment -
Google search engine

Most Popular