Sunday, July 14, 2024
Homeಧಾರ್ಮಿಕಬಪ್ಪನಾಡಿಗೆ ಒಂಬತ್ತು ಮಾಗಣೆಯ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ

ಬಪ್ಪನಾಡಿಗೆ ಒಂಬತ್ತು ಮಾಗಣೆಯ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗ ಒಂಬತ್ತು ಮಾಗಣೆಯ ಭಕ್ತರು ಹಾಗೂ ಕಾರು, ಆಟೋ, ಚಾಲಕ ಮಾಲಕ ಸಂಘ, ಹಿಂದೂ ಯುವ ಸೇನೆ ಮೂಲ್ಕಿ ಘಟಕದ ಸಹಕಾರದೊಂದಿಗೆ 3ನೇ ವರ್ಷದ ಬೃಹತ್ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ಮೂಲ್ಕಿ ಬಸ್ ನಿಲ್ದಾಣದ ಸಮೀಪದ ಶಾರದಾ ಮಂಟಪ ಬಳಿಯಿಂದ ನಡೆಯಿತು. ಅರ್ಚಕ ನರಸಿಂಹ ಭಟ್‌ ಪ್ರಾರ್ಥಿಸಿದರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಬೃಹತ್ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಗೋಪಾಲಕೃಷ್ಣ ಭಟ್ ಬಪ್ಪನಾಡು, ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಅವಿಭಾಜಿತ ದ.ಕ. ಹಾಗೂ ಉಡುಪಿ ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ,ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ,ಉದ್ಯಮಿ ಚೇತನ್ ಶೆಟ್ಟಿ ಕೋಲ್ತಾಡು, ಸುಜಿತ್ ಸಾಲ್ಯಾನ್, ಲತಾ ಶೇಖರ್, ಭಾನುಮತಿ ಶೆಟ್ಟಿ ಶೇಖರ್ ಸಾಲ್ಯಾನ್ ಕೋಲ್ನಾಡು, ಶೀನ ಪೂಜಾರಿ ಪಡುಬಿದ್ರೆ, ರಾಧಿಕಾ ಯಾದವ ಕೋಟ್ಯಾನ್, ಹರ್ಷರಾಜ ಶೆಟ್ಟಿ, ಸತೀಶ್ ಅಂಚನ್, ಪ್ರಶಾಂತ್ ಕಾಂಚನ್, ರಂಗನಾಥ ಶೆಟ್ಟಿ ಅಶೋಕ್ ಕುಮಾರ್ ಶೆಟ್ಟಿ ಕಿಶೋ‌ರ್ ಶೆಟ್ಟಿ ಬಪ್ಪನಾಡು, ದೇವಣ್ಣ ನಾಯಕ್, ಉದಯ ಕುಮಾರ್ ಶೆಟ್ಟಿ ಅಧಿಧನ್, ರಂಗಕೋಟ್ಯಾನ್, ರಮೇಶ್ ಅಮೀನ್ ಕೊಕ್ಕರಕಲ್, ದಿನೇಶ್ ಹೆಗ್ಡೆ ಮಾನಂಪಾಡಿ, ಸಾದು ಅಂಚನ್ ಮಟ್ಟು ಮೂಲ್ಕಿ ಹಿಂದೂ ಯುವ ಸೇನೆ ಅಧ್ಯಕ್ಷ ದಿನೇಶ್ ಕೋಲ್ನಾಡ್, ಅಶ್ವತ್ಥ ಕೊಲಕಾಡಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಹೊರೆ ಕಾಣಿಕೆ ಸಮರ್ಪಿಸಲಾಯಿತು.

RELATED ARTICLES
- Advertisment -
Google search engine

Most Popular