ಸಜೀಪ ಮಾಗಣೆ ಶ್ರೀ ನದಿಯೇಳು ದೈವಂಗಳು ಶ್ರೀ ಉಳ್ಳಾಲ್ದಿ ಶ್ರೀ ನಾಲ್ಕೈಥಾಯ ಹಾಗೂ ಪರಿವಾರ ದೈವಗಳ ಕ್ಷೇತ್ರ ಮಿತ್ತ ಮಜಲು ಇದರ ನೂತನವಾಗಿ ವಾಸ್ತು ಪ್ರಕಾರ ನಿರ್ಮಾಣಗೊಂಡ ಮೂರು ಗೋಪುರಗಳ ಲೋಕಾರ್ಪಣೆ ನಿಮಿತ್ತ ಏಪ್ರಿಲ್ 2 ಹಾಗೂ ಮೂರರಂದು ಜರಗುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನಿಮಿತ್ತ ಸಾರ್ವಜನಿಕ ಅನ್ನದಾನ ಬಗ್ಗೆ ಹಸಿರು ವಾಣಿ ಹೊರೆ ಕಾಣಿಕೆ ಮೆರವಣಿಗೆ ಪೂರ್ವಭಾವಿ ಸಿದ್ಧತಾ ಸಭೆ ಶ್ರೀ ಶಾರದಾ ಅಂಬಿಕಾ ಮಂದಿರ ಶಾರದಾ ನಗರ ಇಲ್ಲಿ ಶುಕ್ರವಾರದಂದು ಜರಗಿತ್ತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮದಲ್ಲಿ 4 ಮಾಗಣೆಯ ಭಗವದ್ಭಕ್ತರೆಲ್ಲರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ವಿನಂತಿಸಿದರು. ಸಮಿತಿಯ ಗೌರವಾಧ್ಯಕ್ಷರಾದ ವಿವೇಕ್ ಶೆಟ್ಟಿ ನಗ್ರೀಗುತ್ತು ಕಾರ್ಯಕ್ರಮದ ಪೂರ್ಣ ಮಾಹಿತಿ ನೀಡಿದರು. ಎಸ್ ಶ್ರೀಕಾಂತ ಶೆಟ್ಟಿ ದೇವಿ ಪ್ರಸಾದ್ ಪೂoಜ. ಕೆ ಶಿವಪ್ರಸಾದ್ ಶೆಟ್ಟಿ ಸತೀಶ್ ಗಟ್ಟಿ ಪರಮೇಶ್ವರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಮಾಗಣೆಯ ಪ್ರತಿ ಮನೆಮನೆಗೂ ಆಮಂತ್ರಣ ಪತ್ರ ಹಾಗೂ ವಿಜ್ಞಾಪನ ಪತ್ರ ತಲುಪಿಸಲು ನಿರ್ಧರಿಸಲಾಯಿತು.