Sunday, July 21, 2024
Homeಅಪಘಾತಮಣಿಪಾಲ | ಬಸ್ಸು ಡಿಕ್ಕಿ ಹೊಡೆದು ಪಾದಚಾರಿ ಸಾವು

ಮಣಿಪಾಲ | ಬಸ್ಸು ಡಿಕ್ಕಿ ಹೊಡೆದು ಪಾದಚಾರಿ ಸಾವು

ಉಡುಪಿ;  ಸಿಟಿ ಬಸ್ಸು ಡಿಕ್ಕಿ ಹೊಡೆದು ಪಾದಚಾರಿ ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಣಿಪಾಲದ ಈಶ್ವರ ನಗರದಲ್ಲಿ ನಡೆದಿದೆ. ಮೃತರು ರಸ್ತೆ ದಾಟುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಈಶ್ವರ ನಗರದ ನಿವಾಸಿ, 78 ವರ್ಷದ ಮಹಾಬಲ ಶೆಟ್ಟಿಗಾರ್ ಮೃತ ದುರ್ದೈವಿ. ಮಣಿಪಾಲದಿಂದ ಪರ್ಕಳ ಕಡೆ ಹೋಗುತ್ತಿದ್ದ ಬಸ್ಸು ಮಹಾಬಲ ಶೆಟ್ಟಿಗಾರ್ ಗೆ ಡಿಕ್ಕಿ ಹೊಡೆದಿದೆ.

ಘಟನೆಯಿಂದ ತೀವ್ರ ಗಾಯಗೊಂಡ ಶೆಟ್ಟಿಗಾರ್ ರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ನಡುವೆ ಮೃತಪಟ್ಟರು. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

RELATED ARTICLES
- Advertisment -
Google search engine

Most Popular