Thursday, July 25, 2024
Homeಉಡುಪಿಉಡುಪಿ: ಹೆದ್ದಾರಿಯಲ್ಲಿ ಹಠಾತ್ ನಿಂತ ಬಸ್ಸು | ಹಿಂಬದಿಯಿಂದ ಬಂದ ಕಾರು ಡಿಕ್ಕಿ; ಮಹಿಳೆಗೆ ತೀವ್ರ...

ಉಡುಪಿ: ಹೆದ್ದಾರಿಯಲ್ಲಿ ಹಠಾತ್ ನಿಂತ ಬಸ್ಸು | ಹಿಂಬದಿಯಿಂದ ಬಂದ ಕಾರು ಡಿಕ್ಕಿ; ಮಹಿಳೆಗೆ ತೀವ್ರ ಗಾಯ

ಉಡುಪಿ: ಯಾವುದೇ ಸೂಚನೆ ನೀಡದೆ ಏಕಾಏಕಿ ಖಾಸಗಿ ಬಸ್ಸೊಂದನ್ನು ನಿಲ್ಲಿಸಿದ್ದರಿಂದ, ಹಿಂಬದಿಯಿಂದ ಬಂದು ಕಾರೊಂದು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಉಡುಪಿಯ ಪಡುಬಿದ್ರಿಯಲ್ಲಿ ಈ ದುರ್ಘಟನೆ ನಡೆದಿದೆ.

ಮಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ಬದ್ದು ಸರ್ವಿಸ್ ರಸ್ತೆಗಿಳಿಯದೆ ರಾಷ್ಟ್ರೀಯ ಹೆದ್ದಾರಿಯಲ್ಲೇ ಏಕಾಏಕಿ ನಿಂತಿತು. ಯಾವುದೇ ಸೂಚನೆ ನೀಡದ ಪರಿಣಾಮ ಮಂಗಳೂರಿನಿಂದ ಉಡುಪಿಯತ್ತ ಸಾಗುತ್ತಿದ್ದ ಕಾರು ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದಿದೆ.

ಮಂಗಳಾದೇವಿ ನಿವಾಸಿ ಪುಷ್ಪಲತಾ ಆಚಾರ್ಯ (56) ಗಾಯಗೊಂಡವರು. ಕಾರಿನಲ್ಲಿ ಅವರ ಪುತ್ರಿ ಸಹಿತ ಮೂವರು ಪ್ರಯಾಣಿಸುತ್ತಿದ್ದರು. ಪುಷ್ಪಲತಾ ಅವರ ಕಾಲು, ಕೈ, ಮೂಗಿಗೆ ಗಂಭೀರ ಗಾಯಗಳಾಗಿವೆ. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.

RELATED ARTICLES
- Advertisment -
Google search engine

Most Popular