ಕಾರ್ಕಳ ಆನೆಕೆರೆ ಪ್ರದೀಪ ಪೆಟ್ರೋಲ್ ಬಂಕ್ ನ ಬಳಿ ಖಾಸಗಿ ಬಸ್ಸು, ಮಂಗಳೂರಿನಿಂದ ಕಾರ್ಕಳ ಕಡೆ ಬರುತ್ತಿರುವ ಎಕ್ಸ್ಪ್ರೆಸ್ ಬಸ್ಸುವಿರುದ್ಧ ದಿಕ್ಕಿನಿಂದ ಅತಿ ವೇಗವಾಗಿ ಬಂದು ಸ್ಕೂಟಿಗೆ ಡಿಕ್ಕಿ ಹೊಡೆದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಸ್ಕೂಟಿ ಸವಾರ ಅಜಮತುಲ್ಲ ಮಿಯಾರು ಮೂಲದವರಾಗಿದ್ದು ಪಿಗ್ಮಿ ಸಂಗ್ರಹಕನಾಗಿ ಕೆಲಸ ಮಾಡುತ್ತಿದ್ದರು. ಇವರು ಮನೆ ಕಡೆ ಹೋಗುವ ಸಂದರ್ಭದಲ್ಲಿ ಬಸ್ಸುವಿರುದ್ಧ ದಿಕ್ಕಿನಲ್ಲಿ ಬಂದು ಅಜ್ಮತ್ ಉಲ್ಲಾ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸುಮಾರು50 ಫೀಟ್ ನ ವರೆಗೆ ಇವರಿಗೆ ರಸ್ತೆಯಲ್ಲಿ ಎಳೆದುಕೊಂಡು ಹೋಗಿರುತ್ತದೆ.
ಸ್ಕೂಟಿ ಸವಾರರ ಸ್ಥಿತಿ ಗಂಭೀರವಾಗಿದ್ದು ಮಣಿಪಾಲ ಆಸ್ಪತ್ರೆಗೆ ಕೊಂಡಯ್ಯಲಾಗಿದೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.