Sunday, July 21, 2024
Homeಬೆಳ್ತಂಗಡಿಬೆಳ್ತಂಗಡಿ | ಖಾಸಗಿ ಬಸ್ಸು-ಬೈಕ್‌ ಡಿಕ್ಕಿ: ನಡ ಗ್ರಾಮಕರಣಿಕರ ಕಚೇರಿ ಸಿಬ್ಬಂದಿ ಸಾವು

ಬೆಳ್ತಂಗಡಿ | ಖಾಸಗಿ ಬಸ್ಸು-ಬೈಕ್‌ ಡಿಕ್ಕಿ: ನಡ ಗ್ರಾಮಕರಣಿಕರ ಕಚೇರಿ ಸಿಬ್ಬಂದಿ ಸಾವು

ಬೆಳ್ತಂಗಡಿ: ಖಾಸಗಿ ಬಸ್ಸು ಹಾಗೂ ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ನಡ ಗ್ರಾಮಕರಣಿಕರ ಕಚೇರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಲಾಯಿಲದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ.
ಬಳಂಜ ನಿವಾಸಿ, ನಡ ಗ್ರಾಮಕರಣಿಕರ ಕಚೇರಿ ಸಹಾಯಕ ಜಯರಾಜ್‌ (45) ಮೃತ ದುರ್ದೈವಿ. ಬೆಳ್ತಂಗಡಿಯಿಂದ ನಡಕ್ಕೆ ತೆರಳುತ್ತಿದ್ದ ಜಯರಾಜ್‌ ಪ್ರಯಾಣಿಸುತ್ತಿದ್ದ ಬೈಕ್‌ ಮತ್ತು ಕಿಲ್ಲೂರಿನಿಂದ ಬೆಳ್ತಂಗಡಿಗೆ ಬರುತ್ತಿದ್ದ ಬಸ್ಸಿನ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಜಯರಾಜ್‌ ತೀವ್ರ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.

RELATED ARTICLES
- Advertisment -
Google search engine

Most Popular