ಹುಬ್ಬಳ್ಳಿ: ಬಸ್ಸು ಚಾಲಕನ ರೀಲ್ಸ್ ಹುಚ್ಚಿಗೆ ಎರಡು ಎತ್ತುಗಳು ಬಲಿಯಾಗಿ, ಇಬ್ಬರು ರೈತರು ಗಾಯಗೊಂಡಿದ್ದಾರೆ. ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿ ಈ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಬಾಗಲಕೋಟೆಗೆ ತೆರಳುತ್ತಿದ್ದ ಸರ್ಕಾರಿ ಬಸ್ಸು ಚಾಲಕ ರೀಲ್ಸ್ ಮಾಡುತ್ತಾ ಬಸ್ಸು ಚಲಾಯಿಸಿದ್ದಾನೆ. ಆದರೆ ಮುಂದಿನಿಂದ ಅದರ ಪಾಡಿಗೆ ಸಾಗುತ್ತಿದ್ದ ಎತ್ತಿನ ಗಾಡಿ ಮತ್ತು ರೈತರನ್ನು ಗಮನಿಸದೆ ರೀಲ್ಸ್ ಗುಂಗಿನಲ್ಲಿದ್ದ ಚಾಲಕ ಹಿಂಬದಿಯಿಂದ ಗುದ್ದಿದ್ದಾನೆ. ಬಸ್ಸು ಹಿಂದಿನಿಂದ ಗುದ್ದಿದುದರಿಂದ ಎರಡು ಎತ್ತುಗಳು ಸಾವನ್ನಪ್ಪಿವೆ. ಇಬ್ಬರು ರೈತರಿಗೆ ಗಂಭೀರ ಗಾಯಗಳಾಗಿವೆ. ಈ ದೃಶ್ಯವುಳ್ಳ ವಿಡಿಯೊ ಈಗ ವೈರಲ್ ಆಗಿದೆ.
ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಡಿಯೊ ನೋಡಲು ಲಿಂಕ್ ಕ್ಲಿಕ್ ಮಾಡಿ…