ಮಂಗಳೂರು: ನಗರದ ಹೊರವಲಯದ ವಾಮಂಜೂರಿನ ಅಮೃತ್ ನಗರ ಸರ್ಕಲ್ ಬಳಿ ವಾಮಂಜೂರು ಲಿಂಗಮಾರುಗುತ್ತು ದಿ. ಶಿವಣ್ಣ ಶೆಟ್ಟಿಯವರ ಸ್ಮರಣಾರ್ಥ ನಿರ್ಮಿಸಿದ ನೂತನ ಬಸ್ಸು ತಂಗುದಾಣದ ಲೋಕಾರ್ಪಣೆ ಸೆ.1ರ ಭಾನುವಾರ ನಡೆಯಲಿದೆ.
ಇದೇ ವೇಳೆ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ತಲಪಾಡಿ ಇವರಿಂದ ಉಚಿತ ವೈದ್ಯಕೀಯ ಶಿಬಿರ ಬೆಳಿಗ್ಗೆ 9:00ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಪೌರ ಸಮಿತಿ (ರಿ) ಅಮೃತನಗರ ಇದರ ಆಶ್ರಯದಲ್ಲಿ ಜರುಗಲಿದೆ.

