Tuesday, April 22, 2025
Homeಉಜಿರೆಉಜಿರೆ ಗುರಿಪಳ್ಳ ಇಂದಬೆಟ್ಟುವಿಗೆ ಪರ್ಯಾಯ ರಸ್ತೆಯ ಮೂಲಕ ಬಸ್ ವ್ಯವಸ್ಥೆ

ಉಜಿರೆ ಗುರಿಪಳ್ಳ ಇಂದಬೆಟ್ಟುವಿಗೆ ಪರ್ಯಾಯ ರಸ್ತೆಯ ಮೂಲಕ ಬಸ್ ವ್ಯವಸ್ಥೆ

ಉಜಿರೆ ಗುರಿಪಳ್ಳ ಇಂದಬೆಟ್ಟುವಿಗೆ ಸಂಪರ್ಕ ಕಲ್ಪಿಸುವ ಸೇತುವೆ ಬಿರುಕು ಬಿಟ್ಟ ಪರಿಣಾಮ ಜಿಲ್ಲಾಧಿಕಾರಿಗಳ ಆದೇಶದಂತೆ ಘನವಾಹನ ಸಂಚಾರ ನಿಷೇಧಿಸಿದ ಪರಿಣಾಮ ಈ ರಸ್ತೆಯ ಮೂಲಕ ಸಂಚರಿಸುವ ಪ್ರಮುಖವಾಗಿ ಶಾಲಾ ಮಕ್ಕಳಿಗೆ ಪ್ರಯಾಣಿಕರಿಗೆ ತೊಂದರೆ ಉಂಟಾಗಿರುತ್ತದೆ.

ಈ ಬಗ್ಗೆ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜಾ ರವರ ಗಮನಕ್ಕೆ ತಂದು ಅವರ ಸೂಚನೆಯಂತೆ ಕೆ ಎಸ್ ಆರ್ ಟಿ ಸಿ ಘಟಕದ ಅಧಿಕಾರಿಗಳನ್ನು ಬೇಟಿಯಾಗಿ ಬಸ್ ವ್ಯವಸ್ಥೆಯನ್ನು ಪರ್ಯಾಯ ರಸ್ತೆಯಾದ ಗುರಿಪಳ್ಳ-ಕಜೆ ಶಾಂತಿನಗರ-ಇಂದಬೆಟ್ಟು-ಬೆಳ್ಳೂರಬೈಲು-ಕಾನರ್ಪ-ಸೊಮಂತಡ್ಕ-ಉಜಿರೆ ಮೂಲಕ ಒದಗಿಸಿಕೊಡುವಂತೆ ಶಾಸಕರ ಸೂಚನೆಯಂತೆ ಜುಲೈ 04 ರಂದು ಅಧಿಕಾರಿಗಳಿಗೆ ತಿಳಿಸಲಾಯಿತು ಮತ್ತು ಶಾಲಾ ಮಕ್ಕಳಿಗೆ ಅನುಕೂಲ ಆಗುವಂತೆ ಬಸ್ ಬರುವ ಸಮಯವನ್ನು ನಿಗದಿ ಪಡಿಸಲು ಸೂಚಿಸಲಾಯಿತು.

ವಾಸ್ತವ ವಿಷಯ ತಿಳಿದ ಅಧಿಕಾರಿಗಳು ಬಸ್ ವ್ಯವಸ್ಥೆ ಸರಿಯಾದ ಸಮಯಕ್ಕೆ ಮಾಡುವುದಾಗಿ ತಿಳಿಸಿದರು. ನಡ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ದಿವಾಕರ ಕರ್ಕೆರ, ಹಿರಿಯರಾದ ಜಯಂತ್ ಗೌಡ ಗುರಿಪಳ್ಳ, ವಿನಯ್ ಕೆ ಗುರಿಪಳ್ಳ ಉಪಸ್ಥಿತರಿದ್ದರು,

RELATED ARTICLES
- Advertisment -
Google search engine

Most Popular